Urdu   /   English   /   Nawayathi

ರೈಲು ಸುರಕ್ಷತೆಗೆ ಬರುತ್ತಿದ್ದಾನೆ ಹೈಟೆಕ್ ‘ಉಸ್ತಾದ್ ರೋಬೊ’

share with us

ನವದೆಹಲಿ: 27 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಮಾನವ ಲೋಪದೋಷಗಳನ್ನು ಸರಿಪಡಿಸಿ ರೈಲುಗಳು ಹೆಚ್ಚು ಸುರಕ್ಷಿತವಾಗಿ ಚಲಿಸಲು ಕೇಂದ್ರೀಯ ರೈಲ್ವೆ ವಿಭಾಗವು ಉಸ್ತಾದ್ ಎಂಬ ಅತ್ಯಾಧುನಿಕ ರೋಬೊ(ಯಂತ್ರಮಾನವ) ಅಭಿವೃದ್ದಿಗೊಳಿಸಿದೆ. ಕೃತಕ ಬುದ್ದಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಎಐ) ಚಾಲಿತ ಈ ರೋಬೊ ರೈಲುಗಳ ಕೆಳಗಿನ ಗೇರುಗಳ ಚಿತ್ರಗಳನ್ನು ತೆಗೆಯುತ್ತದೆ ಮತ್ತು ವಿಡಿಯೋ ರೆಕಾರ್ಡ್ ಮಾಡಿ ದೋಷವನ್ನು ಸರಿಪಡಿಸಲು ಮತ್ತು ನಿರ್ವಹಣೆ ಮಾಡಲು ಎಂಜಿನಿಯರ್‍ಗಳಿಗೆ ಅವುಗಳನ್ನು ರವಾನಿಸುತ್ತದೆ. ಕೇಂದ್ರೀಯ ರೈಲ್ವೆಯ ನಾಗ್ಪುರ ವಲಯದ ಯಾಂತ್ರಿಕ ಶಾಖೆಯು ಉಸ್ತಾದ್ ಯಂತ್ರಮಾನವನ್ನು ಅಭಿವೃದ್ದಿಗೊಳಿಸಿದೆ. ಉಸ್ತಾದ್ ಎಂದರೆ ಅಂಡರ್‍ಗೇರ್ ಸರ್‍ವಲೆನ್ಸ್ ಥ್ರೂ ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಸಿಸ್ಟೆಂಟ್ ಡ್ರೋಯ್ಡ್. ಕೃತಕ ಬುದ್ದಿಮತ್ತೆ ನೆರವಿನ ಸಾಧನದ ಮೂಲಕ ರೈಲಿನ ಒಳಭಾಗದ ನಿಗಾ ವ್ಯವಸ್ಥೆ ಎಂಬುದು ಇದರರ್ಥ. ಹೈ ರೆಸೆಲ್ಯೂಷನ್ (ಎಚ್‍ಡಿ) ಕ್ಯಾಮೆರಾದಿಂದ ಕೋಚ್‍ನ ಎಲ್ಲ ಭಾಗಗಳನ್ನು ಕ್ಷಿಪ್ರವಾಗಿ ಪರಿಶೀಲಿಸಿ ದೋಷದ ಭಾಗಗಳ ಚಿತ್ರಗಳನ್ನು ಕ್ಲಿಕಿಸಿ, ವಿಡಿಯೋ ರೆಕಾರ್ಡ್ ಮಾಡಿಕೊಂಡು ವೈ-ಫೈ ಮೂಲಕ ದುರಸ್ತಿ ವಿಭಾಗದ ಎಂಜಿನಿಯರ್‍ಗಳಿಗೆ ರವಾನಿಸುತ್ತದೆ.

ಎಂಜಿನಿಯರ್‍ಗಳು ಈ ಫೋ ಟೋಗಳು ಮತ್ತು ವಿಡಿಯೋಗಳನ್ನು ನೋಡಿ ಕ್ಷಿಪ್ರವಾಗಿ ಲೋಪದೋಷಗಳನ್ನು ಸರಿಪಡಿಸುತ್ತಾರೆ. ಇದರಿಂದ ರೈಲು ಸುರಕ್ಷತೆಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗುತ್ತದೆ ಎಂದು ವಿವರಿಸಿದ್ದಾರೆ ಕೇಂದ್ರೀಯ ರೈಲ್ವೆ ವಕ್ತಾರ ಸುನಿಲ್ ಉದಾಸಿ. ಈ ರೋಬೋದಲ್ಲಿರುವ ಕ್ಯಾಮೆರಾ 360 ಡಿಗ್ರಿ ಕೋನದಲ್ಲಿ ಯಾವುದೇ ದಿಕ್ಕಿನಲ್ಲಿ ತಿರುಗುವ ಸಾಮಥ್ರ್ಯ ಹೊಂದಿದ್ದು, ಕಮ್ಯಾಂಡ್ ನೀಡಿದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ. ರೈಲಿನ ಎಂಜಿನ್ ಅಥವಾ ಬೋಗಿಗಳ ಕೆಳಗೆ ಅಥವಾ ಒಳ ಭಾಗದಲ್ಲಿ ಯಾವುದೇ ಅನುಮಾನದ ನ್ಯೂನತೆಗಳು ಕಂಡುಬಂದರೆ ಉಸ್ತಾದ್ ತನ್ನ ಕ್ಯಾಮೆರಾ ಕಣ್ಣಿನಲ್ಲಿ ಅದನ್ನು ಜೂಮ್ ಮಾಡುತ್ತದೆ. ಈ ಯಂತ್ರಮಾನವ ಎಲ್‍ಇಡಿ ಹೊನಲು ಬೆಳಕು ಹಾಯಿಸುವ ವ್ಯವಸ್ಥೆಯನ್ನೂ ಹೊಂದಿದ್ದು, ಕತ್ತಲು ಸ್ಥಳಗಳ ಮೇಲೆ ಬೆಳಕು ಹಾಯಿಸಿ ಅಲ್ಲಿನ ಚಿತ್ರಗಳನ್ನು ಕ್ಲಿಕ್ಕಿಸುತ್ತಾನೆ. ಈ ರೋಬೊ ಸಹಾಯದಿಂದ ಲೋಪದೋಷಗಳು ಸರಿಯಾಗುತ್ತವೆ. ಮಾನವನ ಗಮನಕ್ಕೆ ಬಾರದ ಸೂಕ್ಷ್ಮ ನ್ಯೂನತೆಗಳು ಪತ್ತೆಯಾಗುತ್ತವೆ ಎಂದು ಉದಾಸಿ ತಿಳಿಸಿದ್ಧಾರೆ. ಉಸ್ತಾದ್ ಸಹಾಯದೊಂದಿಗೆ ಎಂಜಿನಿಯರ್‍ಗಳು ಮತ್ತು ತಂತ್ರಜ್ಞರು, ಮಾನವ ತಲುಪಲು ಸಾಧ್ಯವಾಗದ ಒಳ ಸ್ಥಳಗಳ ಮೇಲೂ ನಿಗಾ ಇಡಬಹುದು. ರೈಲಿನ ಗೇರು ಭಾಗಗಳ ಕಿರಿದಾದ ಒಳ ಜಗಳಗಳನ್ನು ಉಸ್ತಾದ್ ಕ್ಯಾಮೆರಾ ಕಣ್ಣಿನಿಂದ ನೋಡಲು ಸಾಧ್ಯ ಎಂದು ವಕ್ತಾರರು ವಿವರಣೆ ನೀಡಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا