Urdu   /   English   /   Nawayathi

ಅಮೆರಿಕದಲ್ಲಿ ಭಾರತೀಯರು ಅತಿಹೆಚ್ಚು ಮಾತನಾಡುವ ಭಾಷೆ ಯಾವುದು ಗೊತ್ತೇ..?

share with us

ವಾಷಿಂಗ್ಟನ್: 26 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ಉದ್ಯೋಗಿಗಳು ನೀಡಿರುವ ಕೊಡುಗೆ ದೊಡ್ಡದು. ಅಮೆರಿಕದಲ್ಲಿ ಭಾರತೀಯ ಸಮುದಾಯ ಅತ್ಯಂತ ಪ್ರಬಲವಾಗಿ ಹೊರಹೊಮ್ಮುತ್ತಿದೆ.  ವಿವಿಧ ದೇಶಗಳ ಅನಿವಾಸಿಗಳು ಮತ್ತು ಉದ್ಯೋಗಿಗಳೂ ಅಲ್ಲಿ ನೆಲೆಸಿದ್ದರೂ ಎಲ್ಲರಿಗಿಂತ ಭಾರತೀಯರ ಸಾಧನೆ ಗಮನಾರ್ಹವಾದುದು. ಅಮೆರಿಕದಲ್ಲಿರುವವರ ಪೈಕಿ ಕಾಲು ಭಾಗದಷ್ಟು ಮಂದಿ ತಮ್ಮ ಮನೆಗಳಲ್ಲಿ ಸ್ಥಳೀಯ ಭಾಷೆಗಳನ್ನು ಮಾತನಾಡುತ್ತಾರೆ. ಇಂಥ ಭಾಷೆಗಳು ಅಲ್ಲಿ ಮತ್ತಷ್ಟು ಪ್ರವರ್ಧಮಾನಕ್ಕೆ ಬರುತ್ತಿದೆ. ಈಗ ಅಮೆರಿಕದಲ್ಲಿ ಅತಿ ಹೆಚ್ಚು ಮಾತನಾಡುವ ಭಾರತೀಯ ಭಾಷೆ ಯಾವುದು ಎಂದರೆ ಅಡನು ತೆಲುಗು. 2010 ಮತ್ತು 2017ರ ನಡುವೆ ಅಮೆರಿಕದಲ್ಲಿ ತೆಲುಗು ಮಾತನಾಡುವವರ ಸಂಖ್ಯೆಯಲ್ಲಿ ಶೇ.86ರಷ್ಟು ಹೆಚ್ಚಳ ಕಂಡುಬಂದಿದೆ. ವಲಸೆ ಅಧ್ಯಯನ ಕೇಂದ್ರ(ಸೆಂಟರ್ ಫಾರ್ ಇಮಿಗ್ರೇಷನ್ ಸ್ಟಡೀಸ್-ಸಿಐಎಸ್) ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶ ವರದಿಯಿಂದ ಇದು ತಿಳಿದುಬಂದಿದೆ.

ಈ ಮೂಲಕ ಅಮೆರಿಕದಲ್ಲಿ ತೆಲುಗು ಅತಿ ಹೆಚ್ಚು ವಿದೇಶಿ ಮಾತನಾಡುವ ಭಾಷೆ ಎಂಬ ಹೆಗ್ಗಳಿಕೆ ಪಡೆದಿದೆ. ಅಲ್ಲಿ 4 ಲಕ್ಷ ಮಂದಿ ತೆಲುಗು ಭಾಷೆ ಮಾತನಾಡುತ್ತಿದ್ದು, ಅಮೆರಿಕದಲ್ಲೂ ತೆಲುಗು ಜನಪ್ರಿಯವಾಗುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನತೆಯ ಮಾತೃಭಾಷೆಯಾದ ತೆಲುಗು ಅಮೆರಿಕದಲ್ಲೂ ಪ್ರಾಬಲ್ಯ ಹೊಂದಿರುವುದು ಭಾರತದ ಪ್ರಾದೇಶಿಕ ಭಾಷೆಗೆ ಸಂದ ಗೌರವವಾಗಿದೆ. ಹಿಂದಿ ಮತ್ತು ಗುಜರಾತ್ ಭಾಷೆ ಮಾತನಾಡುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ಶೇ.86ರಷ್ಟು ಪ್ರಮಾಣದೊಂದಿಗೆ ತೆಲುಗು ಅಗ್ರಸ್ಥಾನದಲ್ಲಿದ್ದರೆ ಅರೇಬಿಕ್, ಹಿಂದಿ, ಉರ್ದು, ಚೀನಾ, ಗುಜರಾತಿ ಮತ್ತು ಹೈಟಿಯ ಕ್ರಿಯೋಲೆ ನಂತರದ ಸ್ಥಾನಗಳಲ್ಲಿದೆ.  ಬಂಗಾಳಿ, ತಮಿಳು ಮತ್ತು ಕನ್ನಡ ಮಾತನಾಡುವವರ ಸಂಖ್ಯೆಯೂ ಕಂಡುಬಂದಿದ್ದು, ಅನ್ಯ ಭಾಷೆಗಳಿಗೆ ಹೋಲಿಸಿದರೆ ಈ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ತೀರ ಕಡಿಮೆ.

India--0-1

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا