Urdu   /   English   /   Nawayathi

ಚೆನ್ನೈ: ಫೇಸ್ ಬುಕ್ ಗೆಳೆಯನೊಂದಿಗೆ ಓಡಿಹೋಗಬೇಡ ಎಂದ ತಾಯಿಯನ್ನೇ ಕೊಂದ ಮಗಳು

share with us

ಚೆನ್ನೈ: 25 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು, ತನ್ನ ಫೇಸ್ ಬುಕ್ ಗೆಳೆಯನೊಂದಿಗೆ ಓಡಿಹೋಗುವುದನ್ನು ತಡೆದ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ದಾರುಣ ಘಟನೆ ಸೋಮವಾರ ತಿರುವಳ್ಳೂರಿನಲ್ಲಿ ನಡೆದಿದೆ. ಆಂಜನೇಯಪುರಂ ನಿವಾಸಿ, 19 ವರ್ಷದ ದೇವಿ ಪ್ರಿಯಾಗೆ ಆರು ತಿಂಗಳ ಹಿಂದಷ್ಟೇ ಫೇಸ್ ಬುಕ್ ನಲ್ಲಿ ವಿವೇಕ್ ಎಂಬ ಯುವಕ ಗೆಳೆಯನಾಗಿದ್ದ. ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಇದನ್ನು ಗಮನಿಸಿದ ದೇವಿ ಪ್ರಿಯಾ ಪೋಷಕರು ಮಗಳು ಮನೆಯಿಂದ ಹೋಗದಂತೆ ಮತ್ತು ಮೊಬೈಲ್ ಬಳಸದಂತೆ ನಿರ್ಬಂಧ ಹಾಕಿದ್ದರು. ಈ ವಿಚಾರವನ್ನು ವಿವೇಕ್ಗೆ ತಿಳಿಸಿದ ದೇವಿ ಪ್ರಿಯಾ, ಇಬ್ಬರು ಸೇರಿ ಓಡಿ ಹೋಗುವ ನಿರ್ಧಾರಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿವೇಕ್ ನಿನ್ನೆ ದೇವಿ ಪ್ರಿಯಾಳನ್ನು ಕುಂಬಕೋಣಂಗೆ ಕರೆದುಕೊಂಡು ಬರುವಂತೆ ತನ್ನ ಇಬ್ಬರು ಸ್ನೇಹಿತರಾದ ವಿಗ್ನೇಶ್ ಮತ್ತು ಸತೀಶ್ ನನ್ನು ಆಕೆಯ ಮನೆಗೆ ಕಳುಹಿಸುತ್ತಾನೆ. ಪ್ರಿಯಾ ಸಹ ವಿಗ್ನೇಶ್ ಮತ್ತು ಸತೀಶ್ ರೊಂದಿಗೆ ಹೋಗಲು ಬ್ಯಾಗ್ ನೊಂದಿಗೆ ಸಿದ್ಧವಾಗುತ್ತಾಳೆ.

ಆದರೆ ಮನೆ ಬಿಟ್ಟು ಹೋಗದಂತೆ ಆಕೆಯ ತಾಯಿ ಬಾನುಮತಿ ತಡೆಯುತ್ತಾಳೆ. ಈ ವೇಳೆ ಇಬ್ಬರು ನಡುವೆ ಜಗಳವಾಗಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ದೇವಿ ಪ್ರಿಯಾ, ತಾನು ಪ್ರಿಯಕರನೊಂದಿಗೆ ಓಡಿ ಹೋಗುವುದನ್ನು ತಡೆದ ತಾಯಿಯನ್ನು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ದೇವಿ ಪ್ರಿಯಾ, ವಿವೇಕ್, ವಿಗ್ನೇಶ್ ಮತ್ತು ಸತೀಶ್ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا