Urdu   /   English   /   Nawayathi

ನೇಪಾಳದಲ್ಲಿ ಕಮರಿಗೆ ಉರುಳಿದ ಬಸ್: 23 ಸಾವು

share with us

ಕಠ್ಮಂಡು: 22 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಕಾಲೇಜು ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಯನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ದಿದ್ದ ಬಸ್ ಕಮರಿಗೆ ಉರುಳಿ 23 ಮಂದಿ ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ನೇಪಾಳದಲ್ಲಿ ಶುಕ್ರವಾರ ಸಂಭವಿಸಿದೆ. ಸಲ್ಯಾನ್ ಜಿಲ್ಲೆಯ ಕಪುರ್‌ಕೋಟ್‌ನಿಂದ ಬಸ್ ಕಾಲೇಜಿಗೆ ಹಿಂದಿರುತ್ತಿದ್ದಾಗ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ 34 ವಿದ್ಯಾರ್ಥಿಗಳು, ಇಬ್ಬರು ಬೋಧಕ ಸಿಬ್ಬಂದಿ ಮತ್ತು ಚಾಲಕ ಸೇರಿ ಒಟ್ಟು 37 ಮಂದಿ ಇದ್ದರು. ರಸ್ತೆಯಿಂದ ಬದಿಗೆ ಸರಿದ ಬಸ್ 700 ಮೀಟರ್ ಆಳದ  ಕಮರಿಗೆ ಉರುಳಿತು. ಐವರು ಮಹಿಳೆಯರೂ ಸೇರಿ ಒಟ್ಟು 14 ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಕೃಷ್ಣ ಸೇನ್ ಇಚ್ಚುಕ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಯನಕ್ಕಾಗಿ ತೋಟಗಳಿಗೆ ತೆರಳಿದ್ದರು ಎಂದು ‘ಕಠ್ಮಂಡು ಪೋಸ್ಟ್’ ದಿನಪತ್ರಿಕೆ ವರದಿ ಮಾಡಿದೆ. ರಸ್ತೆ ದುರವಸ್ಥೆ ಮತ್ತು ಕೆಟ್ಟ ಚಾಲನಾ ಪ್ರವೃತ್ತಿ ನೇಪಾಳದಲ್ಲಿ ಬಹುತೇಕ ಅಪಘಾತಗಳಿಗೆ ಮುಖ್ಯ ಕಾರಣ ಎನಿಸಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು (Courtesy: kathmandupost.ekantipur.com)

ಪ್ರ, ವಾ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا