Urdu   /   English   /   Nawayathi

ಸಂತ ಕ್ಲಾಸ್ ವೇಷದಲ್ಲಿ ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಒಬಾಮ, ಮನಕಲಕುವ ದೃಶ್ಯ!

share with us

ವಾಷಿಂಗ್ಟನ್: 22 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಂತ ಕ್ಲಾಸ್ ಕ್ಯಾಪ್ ತೊಟ್ಟು ವಾಷಿಂಗ್ಟನ್ ಮಕ್ಕಳ ರಾಷ್ಟ್ರೀಯ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಉಡುಗೊರೆ ಹಂಚಿ ಸಂಭ್ರಮಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳಿಗೆ, ವೈದ್ಯರಿಗೆ, ಸಿಬ್ಬಂದಿಗೆ ಒಬಾಮ ಕ್ರಿಸ್ಮಸ್ ಹಬ್ಬದ ಶುಭ ಕೋರಿದರು, ಹೊಸ ವರ್ಷದ ಶುಭಾಶಯವನ್ನು ತಿಳಿಸಿದರು. ಕಷ್ಟದ ಸಂದರ್ಭದಲ್ಲಿ ರಾಷ್ಟ್ರಕ್ಕೆ ನರ್ಸ್ ಗಳು ಮತ್ತು ವೈದ್ಯರ ಅಗತ್ಯತೆ ತುಂಬಾ ಇದೆ. ವೈದ್ಯರು ಮತ್ತು ನರ್ಸ್ ಗಳು ನಮ್ಮನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎಂದು ಒಬಾಮ ಶ್ಲಾಘಿಸಿದರು. ನಮ್ಮ ಜನರಿಗೆ ನಾವು ಶರಣಾಗುವುದು ಹಬ್ಬದ ವಿಶೇಷತೆ ಎಂದರು. ಮಕ್ಕಳಿದ್ದ ವಾರ್ಡ್ ಗಳಿಗೆ ತೆರಳಿದ ಒಬಾಮ ಮಕ್ಕಳನ್ನು ಅಪ್ಪಿಕೊಂಡು ಆರೋಗ್ಯ ವಿಚಾರಿಸಿದರು. ಅಮೂಲ್ಯ ಉಡುಗೊರೆಗಳನ್ನು ನೀಡಿದರು. ಇನ್ನು ಕುಟುಂಬ ಎಲ್ಲೇ ಇರಲಿ, ನೀವು ಪ್ರೀತಿಸುವವರು ಎಲ್ಲೇ ಇರಲಿ, ಅಲ್ಲೆಲ್ಲ ಕ್ರಿಸ್ಮಸ್ ಇರಲಿದೆ ಎಂದು ಒಬಾಮ ಚಿಕಿತ್ಸೆಗಾಗಿ ಬಂಧುಗಳಿಂದ ದೂರವಿದ್ದ ಬಾಲಕಿಗೆ ಧೈರ್ಯ ತುಂಬಿದರು. ನಂತರ ಬಾಲಕಿಗೆ ಒಬಾಮ ಮೇಕಪ್ ಕಿಟ್ ಮತ್ತು ನೈಲ್ ಪಾಲಿಶ್ ಅನ್ನು ನೀಡಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا