Urdu   /   English   /   Nawayathi

‘ಚೀನಾಕೆ ಯಾರದೇ ನಿರ್ದೇಶನ ಬೇಡ’: ಷಿ ಜಿನ್‌ಪಿಂಗ್‌

share with us

ಬೀಜಿಂಗ್‌: 19 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ‘ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಚೀನಾಕ್ಕೆ ಯಾರೂ ನಿರ್ದೇಶಿಸಲಾಗದು’ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್‌ ಮಂಗಳವಾರ ಹೇಳಿದರು. ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ 40ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಡೆಂಗ್‌ ಕ್ಸಿಯೋಪಿಂಗ್‌ 1978ರಲ್ಲಿ ಆರಂಭಿಸಿದ್ದ ಆರ್ಥಿಕ ಸುಧಾರಣೆಗಳು ಹಾಗೂ ಅದರ ಪರಿಣಾಮ ದೇಶ ಸಾಧಿಸಿದ ಅಭಿವೃದ್ಧಿಯನ್ನು ದೇಶದ ಜನತೆ ಮುಂದಿಟ್ಟರು. ಅಮೆರಿಕದ ಕಂಪನಿಗಳಿಗೆ ಆದ್ಯತೆ ನೀಡಬೇಕು ಹಾಗೂ ಬೌದ್ಧಿಕ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಡೊನಾಲ್ಡ್‌ ಟ್ರಂಪ್‌ ಆಡಳಿತ ಚೀನಾದ ಮೇಲೆ ಒತ್ತಡ ಹೇರುತ್ತಿರುವ ಸಂದರ್ಭದಲ್ಲಿಯೇ ಷಿ ಅವರ ಈ ಮಾತುಗಳಿಗೆ ಮಹತ್ವ ಬಂದಿದೆ.

‘ಮತ್ತೊಬ್ಬರು ತಮ್ಮ ಆಚಾರ–ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುವುದನ್ನು, ಮತ್ತೊಂದು ದೇಶದ ಆಂತರಿಕ ವಿದ್ಯಮಾನಗಳಲ್ಲಿ ಇನ್ನೊಂದು ದೇಶ ಹಸ್ತಕ್ಷೇಪ ಮಾಡುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಷಿ ಅವರು ಪರೋಕ್ಷವಾಗಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا