Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ಬೆಂಗಳೂರು: 18 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಇದೇ ಮೊದಲ ಬಾರಿಗೆ ಭಾರತೀಯ ವಾಯು ಪಡೆ ಡಿ.18 ರಂದು ಬ್ಲಂಡೆಡ್ ಬಯೋ-ಜೆಟ್ ಇಂಧನ ಬಳಕೆ ಮಾಡಿ ಸೇನಾ ವಿಮಾನದ ಹಾರಾಟ ನಡೆಸಿದೆ. ಬೆಂಗಳೂರಿನಲ್ಲಿ ಈ ಪ್ರಯೋಗ ನಡೆದಿದ್ದು, ಐಎಎಫ್ ಹಾಗೂ ಡಿಆರ್ ಡಿಒ, ಡಿಜಿಎಕ್ಯೂಎ ಹಾಗೂ ಸಿಎಸ್ಐಆರ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಮ್ ನ ಸಹಯೋಗದಲ್ಲಿ ಈ ಪ್ರಯೋಗ ನಡೆಸಲಾಗಿದೆ. ಜು.27 ರಂದು ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ವಾಯುಪಡೆ ಮುಖ್ಯಸ್ಥ ಬಿಎಸ್ ಧನೊವಾ ಅವರು ಬ್ಲಂಡೆಡ್ ಬಯೋ ಜೆಟ್ ಇಂಧನ ಬಳಕೆ ಮಾಡಿ ವಿಮಾನ ಹಾರಾಟ ನಡೆಸುವ ಪ್ರಯೋಗದ ಕುರಿತು ಘೋಷಣೆ ಮಾಡಿದ್ದರು. ಅದರಂತೆಯೇ ಈಗ ಎಎನ್-32 ಟ್ರಾನ್ಸ್ ಪೋರ್ಟರ್ ಏರ್ ಕ್ರಾಫ್ಟ್ ನ್ನು ಬ್ಲಂಡೆಡ್ ಬಯೋ-ಜೆಟ್ ಇಂಧನ ಬಳಕೆ ಮಾಡಿ ಸೇನಾ ವಿಮಾನದ ಹಾರಾಟ ನಡೆಸಲಾಗಿದೆ.
ಬ್ಲಂಡೆಡ್ ಬಯೋ-ಜೆಟ್ ಇಂಧನದಲ್ಲಿ ಶೇ.10 ರಷ್ಟು ಬಯೋ-ಜೆಟ್ ಇಂಧನ ಬಳಕೆ ಮಾಡಲಾಗುತ್ತದೆ. ಛತ್ತೀಸ್ ಗಢ ಬಯೋ ಡಿಸೆಲ್ ಅಭಿವೃದ್ಧಿ ಪ್ರಾಧಿಕಾರ (ಸಿಬಿಡಿಎ)ದಿಂದ ಪೂರೈಕೆಯಾಗುವ ಜಟ್ರೊಫಾ ತೈಲದಿಂದ ಬ್ಲಂಡೆಡ್ ಬಯೋ ಜೆಟ್ ಇಂಧನವನ್ನು ತಯಾರಿಸಲಾಗುತ್ತದೆ. 2018 ರ ಆಗಸ್ಟ್ ತಿಂಗಳಲ್ಲಿ ದೇಶದ ಮೊದಲ ವಾಣಿಜ್ಯ ವಿಮಾನ ಸ್ಪೈಸ್ ಜೆಟ್ ಸಂಸ್ಥೆ ಬಯೋ ಜೆಟ್ ಇಂಧನವನ್ನು ಬಳಸಿ ಡೆಹ್ರಾಡೂನ್-ದೆಹಲಿ ನಡುವೆ ವಿಮಾನ ಹಾರಾಟ ನಡೆಸಿತ್ತು.
ಕ, ಪ್ರ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |