Urdu   /   English   /   Nawayathi

ವಿದೇಶಗಳಲ್ಲಿರುವ ಭಾರತೀಯರು ಈ ವರ್ಷ ತಾಯ್ನಾಡಿಗೆ ಕಳುಹಿಸುವ ಹಣ ಎಷ್ಟು ಗೊತ್ತಾ..?

share with us

ವಾಷಿಂಗ್ಟನ್/ಲಂಡನ್: 18 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಮತ್ತು ಉದ್ಯೋಗದಲ್ಲಿರುವ ಭಾರತೀಯರು ಈ ವರ್ಷ ತಾಯ್ನಾಡಿಗೆ 80 ಶತಕೋಟಿ ಡಾಲರ್ (5.7 ಲಕ್ಷ ಕೋಟಿ ರೂ.ಗಳು) ಕಳುಹಿಸಲಿದ್ದಾರೆ. ಅನಿವಾಸಿ ಭಾರತೀಯರು(ಎನ್‍ಆರ್‍ಐಗಳು) ಮತ್ತು ವಿವಿಧ ದೇಶಗಳಲ್ಲಿ ಇರುವ ಭಾರತೀಯರು ಕಷ್ಟಪಟ್ಟು ಗಳಿಸಿದ ಹಣವನ್ನು ದೇಶಕ್ಕೆ ರವಾನಿಸುತ್ತಿದ್ದು, ಈ ವರ್ಷ ಅದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ವಿಶ್ವಬ್ಯಾಂಕ್ ವರದಿ ಬಹಿರಂಗಗೊಳಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ.16ರಷ್ಟು ಏರಿಕೆಯಾಗಿದೆ. 2017-18ನೇ ಸಾಲಿನಲ್ಲಿ 69 ಶತಕೋಟಿ ಡಾಲರ್‍ಗಳನ್ನು ಭಾರತಕ್ಕೆ ಎನ್‍ಆರ್‍ಐಗಳು ರವಾನಿಸಿದ್ದರು. 2013ರಿಂದಲೂ ಇದು ಏರುಗತಿಯಲ್ಲೇ ಸಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.  ವಿವಿಧ ಧೇಶಗಳಲ್ಲಿರುವ ಭಾರತೀಯರಿಂದ ಸ್ವದೇಶಕ್ಕೆ ರವಾನೆಯಾಗುತ್ತಿರುವ ಹಣದಲ್ಲಿ ದಕ್ಷಿಣ ಭಾರತದಲ್ಲೇ ಕೇರಳಿಯನ್ನರದ್ದೇ ಸಿಂಹಪಾಲು. ಸ್ವದೇಶಕ್ಕೆ ಹಣ ರವಾನಿಸುತ್ತಿರುವ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೆ, ಚೀನಾ (67.4 ಶತಕೋಟಿ ಡಾಲರ್) ಎರಡನೇ ಸ್ಥಾನದಲ್ಲಿದೆ. ಮೆಕ್ಸಿಕೋ, ಫಿಲಿಫೈನ್ಸ್, ಈಜಿಪ್ಟ್ ಮತ್ತು ಅರಬ್ ಗಣರಾಜ್ಯ, ನೈಜಿರಿಯಾ, ಪಾಕಿಸ್ತಾನ, ಉಕ್ರೇನ್, ಬಾಂಗ್ಲಾದೇಶ, ಹಾಗೂ ವಿಯೆಟ್ನಾಂ 10 ದೇಶಗಳ ಪಟ್ಟಿಯಲ್ಲಿ ಅನುಕ್ರಮ ಸ್ಥಾನ ಪಡೆದಿದೆ.

WorldBank

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا