Urdu   /   English   /   Nawayathi

ವಿಷ ಪ್ರಸಾದ ದುರಂತ: ಏಳು ಮಂದಿಯ ವಿರುದ್ಧ ಎಫ್‌ಐಆರ್

share with us

ಚಾಮರಾಜನಗರ: 17 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿನ ವಿಷ ಪ್ರಸಾದ ದುರಂತ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಏಳು ಜನರ ಮೇಲೆ  ಎಫ್‌ಐಆರ್ ದಾಖಲಿಸಿದ್ದಾರೆ. ವಿಷಪ್ರಸಾದ ಸೇವಿಸಿ ಅಸ್ವಸ್ಥರಾದ ರಾಜಮ್ಮ‌ ಎಂಬುವವರ ಹೇಳಿಕೆಯನ್ನು ಆಧರಿಸಿ ದೂರು ದಾಖಲಿಸಿಕೊಳ್ಳಲಾಗಿದೆ. ಚಾಮರಾಜನಗರ : ಶುಕ್ರವಾರದ ದುರಂತ, ಪ್ರಸಾದ ಸೇವಿಸಿ 11 ಸಾವು ಚಿನ್ನಪ್ಪಿ (55), ಮಾದೇಶ್, ವೀರಣ್ಣ, ಲೋಕೇಶ್ (26), ಮಹದೇವ್ ಪೂಜಾರಿ(45),ಪುಟ್ಟಸ್ವಾಮಿ, ಮಹದೇವಸ್ವಾಮಿ ಎಂಬುವರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ದುರಂತದ ತೀವ್ರತೆ ಗೊತ್ತಿದ್ದು, ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳೆಲ್ಲರ ಉದ್ದೇಶವೂ ಒಂದೇ ಎಂಬ ಶಂಕೆಯ ಮೇಲೆ ಐಪಿಸಿ ಸೆಕ್ಷನ್ 34, 204 ಅಡಿ ದೂರು ದಾಖಲಾಗಿದೆ.

ಚಿನ್ನಪ್ಪಿ (55), ಮಾದೇಶ್, ವೀರಣ್ಣ, ಲೋಕೇಶ್ (26), ಮಹದೇವ್ ಪೂಜಾರಿ (45), ಪುಟ್ಟಸ್ವಾಮಿ, ಮಹದೇವಸ್ವಾಮಿ ಎಂಬುವರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ದುರಂತದ ತೀವ್ರತೆ ಗೊತ್ತಿದ್ದು, ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳೆಲ್ಲರ ಉದ್ದೇಶವೂ ಒಂದೇ ಎಂಬ ಶಂಕೆಯ ಮೇಲೆ ಐಪಿಸಿ ಸೆಕ್ಷನ್ 34, 204 ಅಡಿ ದೂರು ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚಾಮರಾಜನಗರ ಎಸ್ಪಿ ಧರ್ಮೇಂದ್ರ ಕುಮಾರ್ ಮೀನ, ಪ್ರಕರಣದ ಸ್ವರೂಪ, ಪ್ರಾಣ ಹಾನಿ ಆಧರಿಸಿ ವಿವಿಧ ಐಪಿಸಿ ಸೆಕ್ಷನ್ ಅಡಿ ಸಹ ಪ್ರಕರಣ ದಾಖಲಿಸಬಹುದು. ಏಳು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗುತ್ತಿದೆ. ಈವರೆಗೆ ಪ್ರಕರಣ ಸಂಬಂಧ ಯಾವುದೇ ವರದಿಗಳು ಬಂದಿಲ್ಲ. ಎಫ್ ಎಸ್ ಐಎಲ್ ಹಾಗೂ ಸಿಎಫ್ ಟಿಆರ್ ಐಗೆ ಪ್ರಸಾದದ ಮಾದರಿ ‌ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا