Urdu   /   English   /   Nawayathi

ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ಕೀಟನಾಶಕ ಬೆರತದ್ದು ನಿಜ: ಐಜಿಪಿ ಶರತ್ ಚಂದ್ರ

share with us

ಕೊಳ್ಳೇಗಾಲ: 17 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ 14 ಮಂದಿ ಸಾವಿಗೀಡಾದ ಪ್ರಕರಣಕ್ಕೆ ಮಹತ್ವದ ತಿರುವು ದೊರಕಿದೆ. ಪ್ರಸಾದದಲ್ಲಿ ಕೀಟನಾಶಕ ಬೆರೆತಿರುವುದು ಖಚಿತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ಬಹಿರಂಗವಾಗಿದ್ದು ಇದರಲ್ಲಿ ಪ್ರಸಾದದಲ್ಲಿ ಮೋನೋ ಕ್ರೊಟೋಫೋಸ್ ಎಂಬ ಕೀಟನಾಶಕ ಬೆರೆತದ್ದು ಸ್ಪಷ್ಟವಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಹೇಳಿದ್ದಾರೆ.  ದುಷ್ಕರ್ಮಿಗಳು ಮೊದಲು ನೀರಿನಲ್ಲಿ ಕೀಟನಾಶಕ ಬೆರೆಸಿ ಬಳಿಕ ಅದನ್ನು ಪ್ರಸಾದಕ್ಕೆ ಬೆರೆಸಿದ್ದರೆನ್ನುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.

"ಪ್ರಸಾದದಲ್ಲಿ ಆರ್ಗಾನ್ ಪಾಸ್ಪಾರಸ್ ಕಾಂಪೌಂಡ್ ಮೊನೊ ಕ್ರೋಟೋ ಫೋಸ್ ಮಿಶ್ರಣ ಆಗಿದೆ ಎಂಬ ವರದಿ ಬಂದಿದೆ.ಇವು ಕೀಟನಾಶಕವಾಗಿದೆ.ಗಿಡಗಳಿಗೆ ಹುಳು, ರೋಗ ಬಾರದಂತೆ ಇದನ್ನು ಬಳಸಲಾಗುತ್ತದೆ" ಎಂದ ಐಜಿಪಿ ತನಿಖೆ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ, ಒಟ್ಟು 13 ಅಧಿಕಾರಿಗಳ ತಂಡ ಪ್ರಕರಣದ ತನಿಖೆ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا