Urdu   /   English   /   Nawayathi

ಒಂದು ತಿಂಗಳಲ್ಲಿ ಭಾರತೀಯ ಪ್ರಜೆಯನ್ನು ಬಿಡುಗಡೆ ಮಾಡಿ: ಸರ್ಕಾರಕ್ಕೆ ಪಾಕ್ ಕೋರ್ಟ್ ಸೂಚನೆ

share with us

ಇಸ್ಲಾಮಾಬಾದ್: 15 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಎಂಜಿನಿಯರ್ ಹಮೀದ್ ನಿಹಾಲ್ ಅನ್ಸಾರಿಯ ಮೂರು ವರ್ಷಗಳ ಜೈಲು ಶಿಕ್ಷೆ ಡಿಸೆಂಬರ್ 15ರಂದು ಅಂತ್ಯಗೊಳ್ಳಲಿದ್ದು, ಒಂದು ತಿಂಗಳಲ್ಲಿ ಆತನನ್ನು ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪಾಕ್ ಉನ್ನತ ಕೋರ್ಟ್ ಫೆಡರಲ್ ಸರ್ಕಾರಕ್ಕೆ ಸೂಚಿಸಿದೆ. ಸರ್ಕಾರ ನನ್ನ ಬಿಡುಗಡೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಅನ್ಸಾರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೇಶಾವರ ಕೋರ್ಟ್, ಭಾರತೀಯ ಪ್ರಜೆಯನ್ನು ಒಂದು ತಿಂಗಳಲ್ಲಿ ಗಡಿಪಾರು ಮಾಡಬೇಕು ಎಂದು ಆದೇಶಿಸಿದೆ. ಅನ್ಸಾರಿ ಬಂಧನದ ಅವಧಿ ಡಿಸೆಂಬರ್ 15ಕ್ಕೆ ಕೊನೆಗೊಳ್ಳುತ್ತದೆ ಮತ್ತು 16ಕ್ಕೆ ಆತನನ್ನು ಬಿಡುಗಡೆ ಮಾಡಬೇಕೆಂದು ಆತನ ಪರ ವಕೀಲರು ವಾದಿಸಿದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪಾಕಿಸ್ತಾನದ ಆಂತರಿಕ ಸಚಿವಾಲಯ, ಅನ್ಸಾರಿಯನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಒಂದು ತಿಂಗಳು ತೆಗೆದುಕೊಳ್ಳಲಿದೆ ಎಂದು ಕೋರ್ಟ್ ಗೆ ತಿಳಿಸಿದೆ.

ಅನ್ಸಾರಿ ನವೆಂಬರ್ 12, 2012ರಂದು, ಸ್ನೇಹಿತೆಯೊಬ್ಬರನ್ನು ಬಲವಂತದ ಮದುವೆಯಿಂದ ಕಾಪಾಡಲು ಫೇಸ್‌ಬುಕ್ ಸ್ನೇಹಿತರೊಬ್ಬರು ಕಳುಹಿಸಿದ್ದ ನಕಲಿ ಗುರುತುಪತ್ರದ ಮೂಲಕ ಅಫಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದರು. ದುರದೃಷ್ಟವಶಾತ್ ಗುಪ್ತಚರ ಅಧಿಕಾರಿಗಳ ಕೈಗೆ ಸಿಕ್ಕು ಜೈಲು ಪಾಲಾಗಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا