Urdu   /   English   /   Nawayathi

ಟರ್ಕಿಯಲ್ಲಿ ಪಾದಚಾರಿ ಸೇತುವೆಗೆ ಅಪ್ಪಳಿಸಿದ ರೈಲು, 9 ಮಂದಿ ಸಾವು

share with us

ಅಂಕಾರ: 13 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಅತಿ ವೇಗದ ರೈಲೊಂದು ರೈಲ್ವೆ ಎಂಜಿನ್‍ಗೆ ಡಿಕ್ಕಿ ಹೊಡೆದು ನಿಲ್ದಾಣದ ಪಾದಚಾರಿ ಸೇತುವೆಗೆ ಅಪ್ಪಳಿಸಿದ ಪರಿಣಾಮ ಓಂಬತ್ತು ಮಂದಿ ಮೃತಪಟ್ಟು, ಇತರ 42 ಜನರು ತೀವ್ರ ಗಾಯಗೊಂಡಿರುವ ಘಟನೆ ಟರ್ಕಿ ರಾಜಧಾನಿ ಅಂಕಾರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ರೈಲು ಅಂಕಾರದಿಂದ ಕೊನ್ಯಾ ನಗರಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರೈಲು ನಿಲ್ದಾಣದಲ್ಲಿ ಹಳಿಗಳನ್ನು ಪರೀಕ್ಷಿಸುತ್ತಿದ್ದ ಎಂಜಿನ್‍ಗೆ ಹೈಸ್ಪೀಡ್ ರೈಲು ಅಪ್ಪಳಿಸಿದೆ. ಈ ದುರಂತದಲ್ಲಿ ಒಂಭತ್ತು ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಂಕಾರ ಗೌರ್ನರ್ ವಾಸಿಪ್ ಸಹಿನ್ ಹೇಳಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

Train--01

Train--04

Train--03

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا