Urdu   /   English   /   Nawayathi

ಮಾದಕ ದ್ರವ್ಯ ವಸ್ತುಗಳನ್ನು ಮಾರುತ್ತಿದ್ದವರ ಜೊತೆ 1.89ಲಕ್ಷ ಸೊತ್ತು ವಶ

share with us

ಮಂಗಳೂರು: 12 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಹೆರಿಟೇಜ್ ಕಟ್ಟಡದ ಎದುರು ರಸ್ತೆಯ ಪಕ್ಕದಲ್ಲಿ ಎಲ್,ಎಸ್,ಡಿ ಎಂಬ ಮಾದಕ ವಸ್ತುಗಳನ್ನು ಮಾರಾಟ ಮಾಡುವ ವೇಳೆ ಪೋಲೀಸರು ದಾಳಿ ನಡೆಸಿ ಎರಡು ಆರೋಪಿಗಳ ಜೊತೆ ಕೃತ್ಯಕ್ಕೆ ಬಳಸುತ್ತಿದ್ದ ಕಾರು, ಚೂರಿ, ಕಬ್ಬಿಣದ ರಾಡ್, ಸ್ಕೂಟರ್, ಮೊಬೈಲ್ ಫೋನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ವಶದಲ್ಲಿರುವವರು ದೇರೆಬೈಲುವಿನ ಬಳಿಯ ಮಂದಾರಬೈಲಿನ ನಿವಾಸಿ ಲಾಯ್ ವೇಗಸ್(26) ಹಾಗೂ ಆಕಾಶಭವನದ ನಿವಾಸಿ ಗೌತಮ್(28) ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಎರಡು ಆರೋಪಿಗಳು ಮಾದಕ ದ್ರವ್ಯಗಳನ್ನು ಮಾರುವ ಜೊತೆ ದರೋಡೆ, ಕೊಲೆ ಯತ್ನ, ಹಾಗೂ ಕೆಲವು ಹಲ್ಲೆಗಳನ್ನೂ ಕೂಡ ನಡೆಸುತ್ತಿದ್ದರು ಎನ್ನಲಾಗಿದೆ. ಗೌತಮ್ ಎಂಬಾತ ಈ ಹಿಂದೆ ಒಂದು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, ಉಚ್ಛ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ ಎಂದು ಹೇಳಲಾಗಿದೆ. 
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا