Urdu   /   English   /   Nawayathi

ಫಿಕ್ರೋಖಬರ್ ಮಾಧ್ಯಮದ ಹೊಚ್ಚ ಹೊಸ ನವಾಯಿತಿ ವೆಬ್‍ಸೈಟ್ ಪ್ರಾರಂಭ

share with us

ಭಟ್ಕಳ: 11 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಸೋಮವಾರದಂದು ರಾತ್ರಿ ಸುಮಾರು 8:30ಕ್ಕೆ ಆಝಾದ್ ನಗರದಲ್ಲಿ ಫಿಕ್ರೋಖಬರ್ ಮಾಧ್ಯಮದ ಹೊಚ್ಚ ಹೊಸ ನವಾಯಿತಿ ವೆಬ್‍ಸೈಟನ್ನು ಭಟ್ಕಳದ ಖಾಝಿ ಮೌಲಾನಾ ಇಕ್ಬಾಲ್ ಮುಲ್ಲಾ ನದ್ವಿ ಅವರ ಹಸ್ತದಿಂದ ಪ್ರಾರಂಭಿಸಲಾಯಿತು. ಕಾರ್ಯಕ್ರಮವು ಕುರ್‍ಆನ್ ಪಠಿಸುವುದರ ಮೂಲಕ ಪ್ರಾರಂಭಗೊಂಡಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಮೌಲಾನಾ ಶಾಕಿರುಲ್ಲಾ ರಷಾದಿ ಅವರು ಆಗಮಿಸಿದ್ದರು. ಇವರು ಸಭೆಯನ್ನು ಕರಿತು ಕೆಲವು ಮಾತುಗಳನ್ನಾಡುತ್ತಾ ಹೊಚ್ಚ ಹೊಸ ವೆಬ್‍ಸೈಟ್ ಪ್ರಾರಂಭಿಸುತ್ತಿರುವದನ್ನು ಸಹ ಕುರಿತು ಹೊಗಳಿದರು. ಮುಂದಿನ ದಿನಗಳಲ್ಲಿ ಈ ಹೊಚ್ಚ ಹೊಸ ವೆಬ್‍ಸೈಟ್ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ನಂತರ ಫಿಕ್ರೋಖಬರ್ ಮಾಧ್ಯಮದ ಮುಖ್ಯ ಸಂಪಾದಕರಾದ ಮೌಲಾನಾ ಹಾಷಿಮ್ ನದ್ವಿ ಅವರು ಆನಂದವನ್ನು ವ್ಯಕ್ತ ಪಡಿಸಿ ಕೆಲವು ಮಾತುಗಳನ್ನಾಡಿದರು. ಫಿಕ್ರೋಖಬರ್ ಮಾಧ್ಯಮದ ಅಧ್ಯಕ್ಷರಾದ ಮೌಲಾನಾ ಇಲ್ಯಾಸ್ ನದ್ವಿ ಅವರು ಅಭಿನಂದಿಸುತ್ತಾ ಹೊಸ್ ವೆಬ್‍ಸೈಟನ್ನು ಕುರಿತು ಕೆಲವು ಮಾತುಗಳನ್ನಾಡಿದರು. ಹಾಗೂ ಇದೇ ಕಾರ್ಯಕ್ರಮದಲ್ಲಿ ಕೆಲವು ದಿನಗಳ ಹಿಂದೆ ಆನ್‍ಲೈನ್ ಮೂಲಕ ನಡೆದ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಬಹುಮಾನ ವಿತರಿಸಲಾಯಿತು.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا