Urdu   /   English   /   Nawayathi

ಬಿಜೆಪಿ ಮುಸ್ಲಿಂ ವಿರೋಧಿ, ಪಾಕ್ ವಿರೋಧಿ: ಹೀಗಾಗಿ ನಮ್ಮ ಜೊತೆ ಸ್ನೇಹ ಹೊಂದಲು ಬಯಸುತ್ತಿಲ್ಲ: ಇಮ್ರಾನ್ ಖಾನ್

share with us

ಇಸ್ಲಾಮಾಬಾದ್: 08 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಿಜೆಪಿ ಮುಸ್ಲಿಂ ವಿರೋಧಿ, ಪಾಕ್ ವಿರೋಧಿ ಎಂದು ವಾಗ್ದಾಳಿ ನಡೆಸಿದ್ದಾರೆ.  ಭಾರತದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷ ಮುಸ್ಲಿಂ ವಿರೋಧಿ ಹಾಗೂ ಪಾಕಿಸ್ತಾನ ವಿರೋಧಿ ಧೋರಣೆಯನ್ನು ಹೊಂದಿದೆ. ಹೀಗಾಗಿ ನಾವು ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಿನಿಂದ ಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ದಿದ್ದು ಇದಕ್ಕೆ ಭಾರತದಿಂದ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದರು. ಮುಂದಿನ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಹೀಗಾಗಿ ಅವರು ನಮ್ಮೊಂದಿಗೆ ಸ್ನೇಹ ಸಂಬಂಧದ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಿದ್ದಾರೆ. ಭಾರತ ನಿರ್ಧಾರ ದುರಂಹಕಾರದ್ದು ಎಂದು ಹೇಳುವ ಮೂಲಕ ಇಮ್ರಾನ್ ಖಾನ್ ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ಅತೃಪ್ತಿ ಹೊರಹಾಕಿದ್ದಾರೆ. 

ಶಾಂತಿಯುತ ಮಾತುಕತೆ ನೀಡಿದ ಆಹ್ವಾನವನ್ನು ಭಾರತ ತಿರಸ್ಕರಿಸುವ ಮೂಲಕ ದರ್ಪದ ಹಾಗೂ ನಕಾರಾತ್ಮಕ ನಿರ್ಧಾರ ತೆಗೆದುಕೊಂಡಿದೆ. ದೊಡ್ಡ ಮಟ್ಟದ ದೂರದೃಷ್ಟಿ, ಕಲ್ಪನೆಗಳಿಲ್ಲದ ಸಣ್ಣ ವ್ಯಕ್ತಿಗಳು ದೊಡ್ಡ ಕಚೇರಿಯಲ್ಲಿ ಇದ್ದಾರೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದರು. ಪಾಕ್ ಆರ್ಥಿಕ ಮುಗ್ಗಟ್ಟಿನ ಬಗ್ಗೆ ತಲೆಕೆಡಿಸಿಕೊಂಡಿರುವ ಇಮ್ರಾನ್ ಖಾನ್ ಗೆ ಕಾಶ್ಮೀರ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ ಭಾರತದ ಜೊತೆ ಶಾಂತಿಯುತ ಸಂಬಂಧಕ್ಕಾಗಿ ಪ್ರಯತ್ನಿಸುತ್ತಿದ್ದು ಪಾಕಿಸ್ತಾನದ ನರಿ ಬುದ್ಧಿಗೆ ಭಾರತ ಸೊಪ್ಪು ಹಾಕುತ್ತಿಲ್ಲ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا