Urdu   /   English   /   Nawayathi

ಹೊರ ರಾಜ್ಯದ ಮೀನುಗಾರರಿಂದ ತೊಂದರೆಯನ್ನು ಆಗ್ರಹಿಸಿ ಸ್ಥಳೀಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

share with us

ಕಾರವಾರ:05 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಹೊರ ರಾಜ್ಯದ ಕೇರಳ ಹಾಗೂ ತಮಿಳುನಾಡಿನ ಮೀನುಗಾರರಿಂದ ಸ್ಥಳೀಯ ಬಡ ಸಾಂಪ್ರದಾಯಿಕ ಮೀನುಗಾರರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಕಾರವಾರದ ಸ್ಥಳೀಯ ಮೀನುಗಾರರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಹೊರ ರಾಜ್ಯದ ಕೇರಳ ಹಾಗೂ ತಮಿಳುನಾಡಿನ ಮೀನುಗಾರರು ಸ್ಥಳೀಯ ಮೀನುಗಾರರ ವ್ಯಾಪ್ತಿಯಲ್ಲಿರುವರುವ ಪ್ರದೇಶದಲ್ಲಿ ತಮ್ಮ ಬಲೆ ಹಾಗೂ ಗಾಳಗಳನ್ನು ಬಳಸಿ ಮೀನು ಹಿಡಿಯುತ್ತಿದ್ದಾರೆ. ಜತೆಗೆ, ಅವರು ಗಾಳದಿಂದ ಸ್ಥಳೀಯ ಮೀನುಗಾರರ ಬಲೆಯನ್ನು ಹರಿದು ಹಾಕುತ್ತಿದ್ದು, ಸ್ಥಳೀಯ ಮೀನುಗಾರರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ.

ಹೊರ ರಾಜ್ಯದ ಕೇರಳ ಹಾಗೂ ತಮಿಳುನಾಡಿನ ಮೀನುಗಾರರು ಮೀನುಗಾರಿಕೆಗೆ ಮರಳು ಹಾಗೂ ಗಾಳಿ ಮರದ ಟೊಂಗೆಯನ್ನು ಬಳಸುತ್ತಿ ದ್ದು, ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇಂಥ ಮೀನುಗಾರಿಕೆಗೆ ಸರ್ಕಾರದ ನಿಷೇಧವಿದ್ದರೂ ಸಹ ಕಾನೂನಿನ ಆದೇಶವನ್ನು ಮೀರಿ ಮೀನುಗಾರಿಕೆ ನಡೆಸಿ, ಮೀನಿನ ಸಂತತಿ ನಾಶವಾಗಲು ಕಾರಣರಾಗಿದ್ದಾರೆ ಎಂದು ತಿಳಿಸಿದರು. ಇದರಿಂದ ಸ್ಥಳೀಯ ಬಡ ಮೀನುಗಾರರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಹೊರ ರಾಜ್ಯದ ಕೇರಳ ಹಾಗೂ ತಮಿಳುನಾಡಿನ ಮೀನುಗಾರರನ್ನು ಹಾಗೂ ಅವರ ಪಾತಿ ದೋಣಿಗಳನ್ನು ಅವರವರ ಊರಿಗೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಮನವಿ ಸಲ್ಲಿಸುವ ವೇಳೆ ಸ್ಥಳೀಯ ಮೀನುಗಾರರಾದ ವಸಂತ ಉಳ್ವೇಕರ, ಧ್ರುವಾ ಉಳ್ವೇಕರ, ಪಾಂಡುರಂಗ ಹರಿಕಂತ್ರ, ಸುಧಾಕರ ಹರಿಕಂತ್ರ, ಮೋಹನ್ ಆವರ್ಸೇಕರ್ ಇನ್ನಿತರರು ಇದ್ದರು.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا