Urdu   /   English   /   Nawayathi

ಮೋದಿ ತಾನೇ ಶ್ರೇಷ್ಠವೆಂದು ಸಾಬೀತುಪಡಿಸಲು ಗಾಂಧಿ, ಪಟೇಲ್ ಮತ್ತಿತರರನ್ನು ಅಪಮಾನಿಸುತ್ತಾರೆ: ರಾಹುಲ್

share with us

ನವದೆಹಲಿ: 05 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ನರೇಂದ್ರ ಮೋದಿ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿಕೊಳ್ಳುವ ಸಲುವಾಗಿ ಸ್ವತಂತ್ರ ಭಾರತದ ನಾಯಕರಾದ ಸರ್ದಾರ್ ಪಟೇಲ್ ಸೇರಿ ಹಲವು ನಾಯಕರ ಸ್ಥಾನವನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು. ಮೋದಿ ತಮ್ಮಭಾಷಣದಲ್ಲಿ ಅಂದಿನ ಕಾಂಗ್ರೆಸ್ ನಾಯಕರ ನೀತಿಯಿಂದಾಗಿ ಕರ್ತಾರ್ ಪುರ್ ಇಂದು ಪಾಕಿಸ್ತಾನದಲ್ಲಿದೆ ಎಂದಿದ್ದ ಹೇಳಿಕೆಗೆ ರಾಹುಲ್ ಈ ಪ್ರತಿಕ್ರಿಯೆ ನೀಡಿದ್ದಾರೆ. "ಕಾಂಗ್ರೆಸ್ ನಾಯಕರ ದೂರದೃಷ್ಟಿಯ ಕೊರತೆಯಿಂದಲೇ ಕರ್ತಾರ್ ಪುರ್ ಇಂದು ಪಾಕಿಸ್ತಾನದಲ್ಲಿದೆ" ಎಂದು ಮೋದಿ ಹೇಳಿದ್ದರು.

ಹಿಂದಿಯಲ್ಲಿರುವ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ರಾಹುಲ್ "ಮೋದಿ ಇದೀಗ ಸರ್ದಾರ್ ಪಟೇಲ್ ಅವರ ನಿರ್ಧಾರವನ್ನು ಪ್ರಶ್ನಿಸುತ್ತಿದ್ದಾರೆ. ಇದೇ ರೀತಿ ಅಂದಿನ ನಾಯಕರ ದೂರದೃಷ್ಟಿಯ ಕೊರತೆಯ ಕಾರಣ ಕರ್ತಾರ್ ಪುರ್ ಪಾಕಿಸ್ತಾನಕ್ಕೆ ಸೇರಿದೆ ಎಂದಿದ್ದಾರೆ. "ಪ್ರಧಾನಿ ಮೋದಿಯವರ ಮನಸ್ಸಿನಲ್ಲಿ ಏನಿದೆ ಎನ್ನುವುದು ಅಂತಿಮವಾಗಿ ಬಹಿರಂಗವಾಗಿದೆ.ಇತರರಿಗೆ ತಾನೇ ಶ್ರೇಷ್ಠವೆಂದು ಸಾಬೀತುಪಡಿಸಲು, ಅವರು ಗಾಂಧಿ, ಪಟೇಲ್ ಮತ್ತು ಇತರ ನಾಯಕರನ್ನು ಅವಮಾನಿಸಬಹುದು." ರಾಹುಲ್ ಗಾಂಧಿ ಹೇಳಿದರು. ಭಾರತ-ಪಾಕಿಸ್ತಾನದ ಗಡಿಪ್ರದೇಶದ ಕಾರ್ತಾರ್ಪುರ್ ಸಾಹಿಬ್ ಕಾರಿಡಾರ್ ಯೋಜನೆ ಶಿಲಾನ್ಯಾಸ ಕಾರ್ಯಕ್ರಮ ಕಳೆದ ವಾರವಷ್ಟೇ ನಡೆದಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا