Urdu   /   English   /   Nawayathi

ಅಗಸ್ಟಾ ಹಗರಣ: ಕ್ರಿಶ್ಚಿಯನ್ ಮೈಕೆಲ್ ಹಸ್ತಾಂತರಕ್ಕೆ ದುಬೈ ಸರ್ಕಾರ ಆದೇಶ

share with us

ಯುಎಇ: 05 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ವಿವಿಐಪಿ ಚಾಪರ್ ಹಗರಣದಲ್ಲಿ ಕಿಕ್ ಬ್ಯಾಕ್ ಗೆ ಸಂಬ್ಂಅಧಿಸಿದಂತೆ ದುಬೈ ಮೂಲದ ಆಂಗ್ಲ ವ್ಯಕ್ತಿ ಕ್ರಿಶ್ಚಿಯನ್ ಜೇಮ್ಸ್ ಮೈಕೆಲ್ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆನ್ನುವ ಮನವಿಗೆ ಯುಎಇ ಹಸಿರು ನಿಶಾನೆ ತೋರಿಸಿದೆ. ದುಬೈನ ಉನ್ನತ ನ್ಯಾಯಾಲಯ ಮೈಕೆಲ್ ಪರ ವಕೀಲರ ಮನವಿಯನ್ನು ತಿರಸ್ಕರಿಸಿದ ಬಳಿಕ ದುಬೈ ಸರ್ಕಾರವು ದ ಮೈಕೆಲ್ ಹಸ್ತಾಂತರಕ್ಕೆ ಆಡಳಿತಾತ್ಮಕ ಆದೇಶ ನೀಡಿದೆ. ಮೈಕೆಲ್ ಈ ವಾರ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಈ ಪ್ರಕರಣವು ರಾಜಕೀಯವಾಗಿ ಪ್ರಚೋದಿತವಾಗಿದೆ ಮತ್ತು ತನ್ನ ಕಕ್ಷಿದಾರರನ್ನು  ಭಾರತೀಯ ಅಧಿಕಾರಿಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂಬ ಮೈಕೆಲ್ ಪರ ವಕೀಲ  ಬಿನ್ ಸುವೈದಾನ್ ವಾದವನ್ನು ದುಬೈನ ಕ್ಯಾಸೇಶನ್ ಕೋರ್ಟ್ ತಿರಸ್ಕರಿಸಿದೆ.  ಕಳೆದ ಕೆಲವು ದಿನಗಳಿಂದ ಭಾರತೀಯ ಸರ್ಕಾರದ ಪ್ರತಿನಿಧಿಗಳು ದುಬೈನಲ್ಲಿ ಇದಾಗಲೇ ಕ್ಯಾಂಪೈನ್ ಮಾಡುತ್ತಿದ್ದಾರೆ. ಮೈಕೆಲ್ ಅವರನ್ನು ವಶಕ್ಕೆ ನೀಡುವಂತೆಯೂ, ಇದಕ್ಕೆ ಸಂಬಂಧಿಸಿದ ಕಾನೂನು ಕ್ರ್ಮಗಳು ಪೂರ್ಣಗೊಂಡಿದೆ ಎಂದೂ ಅವರು ಒತ್ತಡ ಹೇರಿದ್ದಾರೆಂದು ಸರ್ಕಾರಿ ಮೂಲಗಳು ಹೇಳಿದೆ. ಕ್ರಿಶ್ಚಿಯನ್ ಮೈಕೆಲ್ ಒಮ್ಮೆ ದೆಹಲಿಗೆ ಆಗಮಿಸಿದ ಬಳಿಕ ಅವನನ್ನು ಔಪಚಾರಿಕವಾಗಿ ಬಂಧಿಸಲಾಗುವುದು ಮತ್ತು ಪಟಿಯಾಲಾ ಹೌಸ್ ನಲ್ಲಿನ ದೆಹಲಿ ನ್ಯಾಯಾಲಯಕ್ಕೆಹಾಜರುಪಡಿಸಿ ವಿಚಾರಣೆ ನಡೆಸಲಾಗುತ್ತದೆ. ಕಳೆದ ವರ್ಷ ಫೆಬ್ರುವರಿಯಲ್ಲಿ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಗೆ ಮೈಕೆಲ್ ಹಸ್ತಾಂತರ ಸಂಬಂಧ ಭಾರತ ಅರ್ಜಿಯನ್ನು ಸಲ್ಲಿಸಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا