Urdu   /   English   /   Nawayathi

ಚೆನ್ನೈ: ಮಹಿಳಾ ಬಾಡಿಗೆದಾರರ ಕೊಣೆ, ಬಾತ್ ರೂಂನಲ್ಲಿ ಹಿಡನ್ ಕ್ಯಾಮೆರಾ ಫಿಕ್ಸ್ ಮಾಡಿದ್ದ ಅಪಾರ್ಟ್ ಮೆಂಟ್ ಮಾಲೀಕನ ಬಂಧನ

share with us

ಚೆನ್ನೈ: 04 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ತನ್ನ ಅಪಾರ್ಟೆಮೆಂಟ್ ನ ಮಹಿಳಾ ಬಾಡಿಗೆದಾರರ ಕೊಣೆಗಳಲ್ಲಿ ಹಿಡನ್ ಕ್ಯಾಮೆರಾ ಫಿಕ್ಸ್ ಮಾಡಿದ ಕಾಮೂಕ ಮಾಲೀಕನನ್ನು ಮಂಗಳವಾರ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೇರಳ ಮೂಲದ ಸಂಪತ್ ಕುಮಾರ್ ಆಡಂಬಾಕಂ ನಲ್ಲಿ ಅಪಾರ್ಟ್ ಮೆಂಟ್ ವೊಂದನ್ನು ಹೊಂದಿದ್ದು, ಕಳೆದ ಸೆಪ್ಟೆಂಬರ್ ನಿಂದ ಏಳು ಉದ್ಯೋಗಸ್ಥ ಮಹಿಳೆಯರು ವಾಸಿಸುತ್ತಿದ್ದರು. ಈ ಪೈಕಿ ಓರ್ವ ಮಹಿಳೆ ತನ್ನ ಹೇರ್ ಡ್ರಾಯರ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಪವರ್ ಪ್ಲಗ್ ನ ಸಾಕೇಟ್ ಅನ್ನು ತೆಗೆದಿದ್ದು, ಅದರಲ್ಲಿ ಸಣ್ಣ ಕ್ಯಾಮೆರಾ ಪತ್ತೆಯಾಗಿದೆ.

ಅನುಮಾನಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಾರ್ಟ್ ಮೆಂಟ್ ಶೋಧ ನಡೆಸಿದಾಗ, ಬೆಡ್ ರೂಂನ ಬೆಡ್ ಲ್ಯಾಂಪ್ಸ್ ಹಾಗೂ ಬಾತ್ ರೂಂನ ಟೊವಲ್ ರಾಡ್ ಸೇರಿದಂತೆ ಹಲವು ಕಡೆ ಹಿಡನ್ ಕ್ಯಾಮೆರಾಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಪತ್ ಕುಮಾರ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا