Urdu   /   English   /   Nawayathi

ಪ್ರಧಾನಿ ಮೋದಿ ಭಾರತ ಮಾತೆಗೆ ಜೈಕಾರ ಹೇಳುವ ಬದಲು ಅಂಬಾನಿಗೆ ಜೈ ಎನ್ನಲಿ: ರಾಹುಲ್ ಗಾಂಧಿ

share with us

ಅಲ್ವಾರ್(ರಾಜಸ್ಥಾನ): 04 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) "ಪ್ರಧಾನಿ ನರೇಂದ್ರ ಮೋದಿ ತಮ್ಮ ಎಲ್ಲಾ ಪ್ರಚಾರದ ರ್ಯಾಲಿಗಳಲ್ಲಿ "ಭಾರತ್ ಮಾತಾ ಕಿ ಜೈ" ಎಂದು ಘೋಷಣೆ ಹೇಳುತ್ತಾ ಬಂದಿದ್ದಾರೆ. ಇನ್ನು ಮುಂದೆ ಅವರು ಅನಿಲ್ ಅಂಬಾನಿ ಕಿ ಜೈ ಎಂದು ಭಾಷಣ ಪ್ರಾರಂಭಿಸಲಿ" ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿ ಪ್ರತಿಬಾರಿಯೂ ತಮ್ಮ ಪ್ರಚಾರ ಭಾಷಣ ಆರಂಭದಲ್ಲಿ ಭಾರತ್ ಮಾತಾ ಕಿ ಜೈ  ಎನ್ನುತ್ತಾರೆ ಆದರೆ ಅವರು ಅನಿಲ್ ಅಂಬಾನಿ ಪರ ಕೆಲಸ ಮಾಡುತ್ತಾರೆ ಹೀಗಾಗಿ ಅವರಿನ್ನು ಅನಿಲ್ ಅಂಬಾನಿ ಕಿ ಜೈ, ನೀರವ್ ಮೋದಿ ಕಿ ಜೈ, ಲಲಿತ್ ಮೋದಿ ಕಿ ಜೈ ಎಂದು ಘೋಷಣೆ ಕೂಗಬೇಕು ಎಂದು ರಾಹುಲ್ ಕುಟುಕಿದ್ದಾರೆ.

ರಾಜಸ್ಥಾನದ ಅಲ್ವಾರ್ ಜಿಲ್ಲೆ ಮಲಕೇರಾದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಉದ್ಯೋಗಾವಕಾಶ ನೀಡಿಕೆ, ಕೃಷಿ ಸಾಲ ಮನ್ನಾ, ರಾಫೇಲ್ ಒಪ್ಪಂದ ಮತ್ತು ಅಪನಗದೀಕರಣದ ವಿಚಾರದಲ್ಲಿ ಕಟುವಾಗಿ ಖಂಡಿಸಿದರು. 2014ರ ಲೋಕಸಭೆ ಚುನಾವಣೆಯಲ್ಲಿ 2 ಕೋಟಿ ಯುವಕರಿಗೆ ಉದ್ಯೋಗಾವಕಾಶ ನೀಡುವ ಭರವಸೆಯನ್ನು ಮೋದಿ ನೀಡಿದ್ದರು.ಹಾಗೊಂದು ವೇಳೆ ಉದ್ಯೋಗ ಭರವಸೆ ಈಡೇರಿಸಿದ್ದಾದರೆ ನಾಲ್ಕು ಯುವಕರು ಅದೇಕೆ ಆತ್ಮಹತ್ಯೆ ಮಾಡಿಕೊಂಡರು? ರಾಹುಲ್ ಪ್ರಶ್ನಿಸಿದ್ದಾರೆ. ಕಳೆದ ತಿಂಗಳು ಅಲ್ವಾರ್ ಜಿಲ್ಲೆಯಲ್ಲಿ ಶಂಕಿತ ಆತ್ಮಹತ್ಯೆ ಪ್ರಕರಣದಲ್ಲಿ ಲ್ಲಿ ಚಲಿಸುತ್ತಿರುವ ರೈಲಿನಿಂದ ಹಾರಿ ನಾಲ್ವರು ಯುವಕರು ಸಾವನ್ನಪ್ಪಿದ್ದರು.ನಿರುದ್ಯೋಗದಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿತ್ತು. "ನೀವು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತೀರಿ, ದೇಶದ ಸಾವಿಆರು ರೈತರು, ಯುವಕರು, ಕಾರ್ಮಿಕರ ಕಷ್ಟವನ್ನು ನೀವು ಹೇಗೆ ಮರೆಯಬಲ್ಲಿರಿ? 3.5 ಲಕ್ಷ ಕೋಟಿ ರೂ. ಮೌಲ್ಯದ ಕೆಟ್ಟ ಸಾಲ ಬಾಕಿ ಇದೆ, ಆದರೆ ಮೋದಿ ಸರ್ಕಾರದಿಂದ ಇದುವರೆಗೆ ರೈತರ ಒಂದೇ ಒಂದು ರು. ಸಾಲ ವಜಾ ಆಗಿಲ್ಲ."

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವನ್ನು ಖಚಿತಪಡಿಸಿದ ರಾಹುಲ್ ಕಾಂಗ್ರೆಸ್ ಸರ್ಕಾರವನ್ನು ರಚಿಸುತ್ತದೆ ಹಾಗೂ ರೈತರ ಸಾಲವನ್ನು ಹತ್ತು ದಿನಗಳಲ್ಲಿ ಮನ್ನಾ ಮಾಡಲಿದೆ.ಯುವಕರಿಗೆ ಉದ್ಯೋಗ ನೀಡಲು  ನಮ್ಮ ಪಕ್ಷದ ಮುಖ್ಯಮಂತ್ರಿಗಳು ದಿನದ 18  ಗಂಟೆಗಳನ್ನು ಮೀಸಲಿರಿಸಲಿದ್ದಾರೆ ಎಂದರು. ರಾಫೆಲ್ ಒಪ್ಪಂದದ ಕುರಿತು ಮಾತನಾಡಿದ ಅವರು, ಪ್ರಧಾನಮಂತ್ರಿಯವರು ಈ ವಿಷಯದ ಕುರಿತು ಮಾತನಾಡುವುದಿಲ್ಲ ಏಕೆಂದರೆ ಅವರು ಮಾತನಾಡುತ್ತಿದ್ದರೆ ಯಾರಾದರೂ ಸಾರ್ವಜನಿಕರು  'ಚೌಕಿದಾರ್ ಚೋರ್ ಹೈ'  ಎಂದೆನ್ನಬಹುದು, ದೇಶದ 15 ಪ್ರಮುಖ ಉದ್ಯಮಿಗಳಿಗಾಗಿ ನರೇಂದ್ರ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا