Urdu   /   English   /   Nawayathi

ಮಂಡ್ಯ: ನಾಲೆಗೆ ಸ್ಕೂಟರ್‌ ಬಿದ್ದು ಮೂವರ ಸಾವು

share with us

ಮಂಡ್ಯ: 03 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ತಾಲ್ಲೂಕಿನ ಲೋಕಸರ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ ಸ್ಕೂಟರ್‌ ಬಿದ್ದು ಅಜ್ಜಿ, ಮಗಳು ಹಾಗೂ ಮೊಮ್ಮಗಳು ಮೃತಪಟ್ಟಿದ್ದಾರೆ. ಲೋಕಸರ ಗ್ರಾಮದ ಅಂಬಿಕಾ (33), ನಾಗಮ್ಮ (55), ಮಾನ್ಯತಾ(6) ಮೃತಪಟ್ಟವರು. ಅಂಬಿಕಾ, ಅವರ ತಾಯಿ ನಾಗಮ್ಮ, ಮಗಳು ಮಾನ್ಯತಾ ಭಾನುವಾರ ರಾತ್ರಿ ಗ್ರಾಮದ ದೇವಸ್ಥಾನಕ್ಕೆ ತೆರಳಿ ವಾಪಸ್ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ.

ನೆರವಿಗೆ ಬಂದ ಗ್ರಾಮಸ್ಥರು, ಇಬ್ಬರು ಮಹಿಳೆಯರನ್ನು ಮೇಲೆತ್ತಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು.ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಸಬ್ಬನಹಳ್ಳಿ ಬಳಿ ಮೃತದೇಹ ಪತ್ತೆಯಾಗಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا