Urdu   /   English   /   Nawayathi

2019ರ ಲೋಕಸಭೆ ಚುನಾವಣೆ ಜತೆಗೇ ಆಂಧ್ರಪ್ರದೇಶ, ಒಡಿಶಾ ಸೇರಿ 4 ರಾಜ್ಯಗಳ ವಿಧಾನಸಭೆಗೂ ಚುನಾವಣೆ?

share with us

ನವದೆಹಲಿ: 03 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಆಂಧ್ರ ಪ್ರದೇಶ್, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆಗೆ 2019ರ ಲೋಕಸಭೆ ಚುನಾವಣೆ ಜತೆಯಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದೆ. ನಾಲ್ಕು ರಾಜ್ಯಗಳ ವಿಧಾನಸಭೆ ಅವಧಿಯು 2019 ಮೇ, ಜೂನ್ ನಲ್ಲಿ ಕೊನೆಯಾಗಲಿದೆ. ಇನ್ನು ಅವಧಿಗೆ ಮುನ್ನ ವಿಸರ್ಜನೆಯಾದ ಜಮ್ಮು ಕಾಶ್ಮೀರ ವಿಧಾನಸಭೆಗೆ ಸಹ ಸಾರ್ವತ್ರಿಕ ಚುನಾವಣೆ ಜತೆಜತೆಗೇ ಮತದಾನ ನಡೆಯಲಿದೆ ಎಂದು ಮೂಲಗಳು ಹೇಳಿದೆ. ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ವಿಧಾನಸಭೆಗೆ ಲೋಕಸಭೆ ಚುನಾವಣೆಯ ಜತೆಗೇಚುನಾವಣೆ ಆಯೋಜನೆಯಾಗಲಿದೆ ಎಂದು ಚುನಾವಣಾ ಆಯೋಗ (ಇಸಿ) ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜಮ್ಮು ಕಾಶ್ಮೀರ ವಿಧಾನಸಭೆಯನ್ನು ಕಳೆದ ತಿಂಗಳ ಮೊದಾ ವಾರ ವಿಸರ್ಜಿಸಲಾಗಿದ್ದು ವಿಧಾನಸಭೆ ವಿಸರ್ಜನೆಯಾದ ಆರು ತಿಂಗಳಿಗೆ ಮುನ್ನ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಯೋಜನೆಯಾಗಿದೆ. ಇದರಂತೆ ಮೇ ತಿಂಗಳಿಗೆ ವಿಧಾನಸಭೆ ವಿಸರ್ಜನೆಯಾಗಿ ಆರು ತಿಂಗಳು ಮುಗಿಯಲಿದೆ. ಹೀಗಾಗಿ ಲೋಕಸಭೆ ಚುನಾವಣೆಯ ಜತೆಗೆ ಅಥವಾ ಅದಕ್ಕೆ ಮುನ್ನವೇ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಯಬಹುದು, ಯಾವ ದಿನ ವಿಧಾನಸಭೆಗೆ ಮತದಾನ ನಡೆಯಲಿದೆ ಎನ್ನುವುದು ಭವಿಷ್ಯದಲ್ಲಿ ನಿರ್ಧಾರವಾಗಲಿದೆ ಎಂದು ಓರ್ವ ಅಧಿಕಾರಿ ಹೇಳಿದ್ದಾರೆ. ಜಮ್ಮು ಕಾಶ್ಮೀರದ ವಿಧಾನಸಭೆ ಆರು ವರ್ಷದ ಅವಧಿಯು ಮಾರ್ಚ್ 16, 2021ಕ್ಕೆ ಅಂತ್ಯಗೊಳ್ಳುತ್ತದೆ. ಆದರೆ ಇತರೆ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಯ ಅವಧಿ ಐದು ವರ್ಷಗಳಾಗಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಭದ್ರತಾ ಪಡೆಗಳನ್ನು ನಿಯೋಜಿಸಿದಾಗ, ವಿಧಾನಸಭೆ ಚುನಾವಣೆ ಸಹ ಏಕಕಾಲದಲ್ಲಿ ನಡೆಯುವುದರಿಂದ ಚುನಾವಣಾ ಅಧಿಕಾರಿಗಳಿಗೆ ಅನುಕೂಲವಾಗಲಿದೆ ಎಂದು ಸರ್ಕಾರದ ಮೂಲಗಳು ಹೇಳಿದೆ. ಇನ್ನು ಒಂದು ವೇಳೆ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗಳೂ ಸಹ ಈ ನಾಲ್ಕು ರಾಜ್ಯದ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯೊಂದಿಗೇ ನಡೆದಿದ್ದಾದರೆ ಮತ್ತೆ 2019ರಲ್ಲಿ ಇನ್ನಾವ ಚುನಾವಣೆಗಳು ಇರುವುದಿಲ್ಲ. ನಿಜಾಂಶದಲ್ಲಿ ಈ ಎರಡೂ ರಾಜ್ಯಗಳ ವಿಧಾನಸಭೆ ಅವಧಿಯು ನವೆಂಬರ್ 2019ರಲ್ಲಿ ಮುಗಿಯಲಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದು ಪಕ್ಷದ ಮುಝ್ಖಂಡರು ಈ ಸಂಬಮ್ಧ ಮುಂಚಿತವಾಗಿ ನಿರ್ಧಾರ ಕೈಗೊಂಡ ಪಕ್ಷದಲ್ಲಿ ಲೋಕಸಭೆ ಜತೆ ಜತೆಗೇ ಆರು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا