Urdu   /   English   /   Nawayathi

ತೀವ್ರವಾದಿ ಹಿಂದುತ್ವದ ಬೆಳವಣಿಗೆ ತಡೆಯಲು ಮೋದಿಗೆ ಅಮೆರಿಕ ಸಂಘಟನೆಗಳ ಒತ್ತಾಯ!

share with us

ವಾಷಿಂಗ್: 02 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ತೀವ್ರವಾದಿ ಹಿಂದುತ್ವದ ಬೆಳವಣಿಗೆ ತಡೆಯುವಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಭಾರತದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನವನ್ನು ತಡೆಯಬೇಕೆಂದು ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕಾರ್ಯಕರ್ತರು ಆಗ್ರಹಿಸಿದ್ದು, ಇಂತಹ ದೌರ್ಜನ್ಯಗಳನ್ನು ಖಂಡಿಸಲು ಕರೆ ನೀಡಿದ್ದಾರೆ. ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಎಂಬ ಶೀರ್ಷಿಕೆಯಡಿ ವಾಷಿಂಗ್ ಟನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಕಾಂಗ್ರೆಸ್ ನ ಸಿಬ್ಬಂದಿಗಳು, ರಾಜ್ಯದ ಅಧಿಕಾರಿಗಳು ಹಾಗೂ ಅಮೆರಿಕದಲ್ಲಿರುವ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗಗಳು (ಯುಎಸ್ ಸಿಐಆರ್ ಎಫ್) ಹಾಗೂ ಸಿವಿಲ್ ಸೊಸೈಟಿ ಸದಸ್ಯರು ಭಾಗವಹಿಸಿದ್ದರು. 

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ತೀವ್ರವಾದಿಗಳನ್ನು ಖಂಡಿಸದೇ ಇರುವುದು ಇಂದಿನ ದಿನ ನಾವು ನೋಡುತ್ತಿರುವ ಅಲ್ಲಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅಮೆರಿಕ ಆಯೋಗದ  ಲಾಂಟೋಸ್ ಸ್ವೆಟ್ ಹೇಳಿದ್ದಾರೆ.  ಇದೇ ವೇಳೆ ತೀವ್ರವಾದಿ ಹಿಂದುತ್ವ ಸಂಘಟನೆಗಳ ಬೆಳವಣಿಗೆಯನ್ನು ತಡೆಯಲು ಹಾಗೂ ತೀವ್ರವಾದಿ ಹಿಂದುತ್ವದ ಮೂಲಕ ದೌರ್ಜನ್ಯದಲ್ಲಿ ತೊಡಗಿರುವವರಿಗೆ ಅಂಕುಶ ಹಾಕಬೇಕೆಂದು ಪ್ರಧಾನಿ ಮೋದಿಯನ್ನು ಒತ್ತಾಯಿಸಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا