Urdu   /   English   /   Nawayathi

ಪ್ರಕಾಶ್ ರೈ ಮೂರು ಗುರುತಿನ ಚೀಟಿ ಹೊಂದಿದ್ದಾರೆ! ಆರೋಪಕ್ಕೆ ರೈ ಹೇಳಿದ್ದೇನು?

share with us

ಬೆಂಗಳೂರು: 01 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಕನ್ನಡಿಗನಾದ ಪ್ರಕಾಶ್ ರೈ ಅವರು ಮೂರು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ತಮಿಳುನಾಡು ಮತ್ತು ತೆಲಂಗಾಣದಲ್ಲಿ ವೋಟರ್ ಐಡಿ ಕಾರ್ಡ್ ಹೊಂದಿರುವ ಅವರಿಗೆ ಕರ್ನಾಟಕದಲ್ಲೇ ಗುರುತಿನ ಚೀಟಿ ಇಲ್ಲ ಎಂಬುದು ವಿಶೇಷ. ಇನ್ನು ಮೂರು ವೋಟರ್ ಐಡಿ ಕಾರ್ಡ್ ಹೊಂದಿರುವ ಆರೋಪದ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅವರು ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಇಂತಹ ಆರೋಪ ಮಾಡಲಾಗಿದೆ. ಇನ್ನು ಅವರು ತಪ್ಪು ಗ್ರಹಿಕೆಯಿಂದ ದೂರು ಕೊಟ್ಟಿರಬೇಕು. ಒಂದು ವೇಳೆ ಅವರ ಬಳಿ ಆಧಾರಗಳಿದ್ದರೆ ರುಜುವಾತು ಮಾಡಲಿ. ನಾನು ಕೂಡ ನನ್ನ ಬಳಿ ಒಂದೇ ವೋಟರ್ ಐಡಿ ಇರುವುದನ್ನು ಸಾಬೀತು ಮಾಡುತ್ತೇನೆ ಎಂದರು. 

ನನ್ನ ವಿರುದ್ಧ ಪ್ರಶ್ನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ, ನಾನು ಕರ್ನಾಟಕದಲ್ಲಿ ಮತದಾನ ಮಾಡುತ್ತಿಲ್ಲವೆಂದು ಅನೇಕರು ದೂರಿದ್ದಾರೆ. ತಮಿಳುನಾಡಿನ ಅಡಿಯಾರ್ ನಲ್ಲಿ ನಾನು 20 ವರ್ಷಗಳಿಂದ ವಾಸವಾಗಿದ್ದೇನೆ. ಹೀಗಾಗಿ ಅಲ್ಲಿ ಮಾತ್ರ ಮತದಾನದ ಗುರುತಿನ ಚೀಟಿ ಪಡೆದುಕೊಂಡಿರುವೆ. ಭಾರತದ ಪ್ರಜೆಯಾಗಿರುವ ನಾನು ಎಲ್ಲಿಯಾದರೂ ಮತದಾನದ ಹಕ್ಕನ್ನು ಪಡೆದುಕೊಂಡಿರುವೆ ಎಂದು ತಿಳಿಸಿದರು. ಬಹುಭಾಷಾ ನಟ ಪ್ರಕಾಶ್ ರೈ ಅವರು ಮೂರು ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರೈ ತಮಿಳುನಾಡಿನ 2 ಕಡೆ ಮತ್ತು ತೆಲಂಗಾಣದಲ್ಲಿ ವೋಟರ್ ಐಡಿ ಹೊಂದಿದ್ದಾರೆ ಎಂದು ದಾಖಲೆ ಇರುವ ಮಾಹಿತಿ ಈಗ ವೈರಲ್ ಆಗಿದೆ.

View image on Twitter

Shakuntala Iyer@shakkuiyer

Hi Friends!

Got something interesting about @Prakashraaj

Only 3 Epic IDs just in Tamil Nadu

Don't retweet and shame him pls !

1,194

10:57 PM - Nov 30, 2018

1,606 people are talking about this

Twitter Ads info and privacy

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا