Urdu   /   English   /   Nawayathi

ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಜೀವಬೆದರಿಕೆ: ಪ್ರಕರಣ ದಾಖಲು, ಭದ್ರತೆ ನೀಡಲು ಆಯುಕ್ತರಿಗೆ ಮನವಿ

share with us

ಬೆಂಗಳೂರು: 01 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಟಿಪ್ಪು ಜಯಂತಿ ವಿರೋಧಿಸುವ ಕಾರ್ಯಕ್ರಮದಲ್ಲಿ ಟಿಪ್ಪು ಬಗ್ಗೆ  ಟೀಕೆ ಮಾಡಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವಬೆದರಿಕೆ ಬಂದಿದ್ದರ ಬಗ್ಗೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದೆ. ಫೇಸ್ ಬುಕ್ ನಲ್ಲಿ ಸದಾ ದ್ವೇಷಪೂರಿತ ಪೋಸ್ಟ್ ಗಳನ್ನು ಉತ್ತೇಜಿಸುವ ಪೇಜ್ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ. " ಜೀವಬೆದರಿಕೆ ಹಾಕಲಾಗಿರುವವರ ಐಪಿ ಅಡ್ರೆಸ್ ನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.  ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿಗೂ ಮನವಿ ಮಾಡಲಾಗಿದ್ದು, ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. 

ಬಿಜೆಪಿ ನಾಯಕರಾದ ವಿನೋದ್ ಕೃಷ್ಣಮೂರ್ತಿ, ಖ್ಯಾತ ವಕೀಲರಾದ ವಿವೇಕ್ ರೆಡ್ಡಿ ಸಂತೋಷ್ ತಮ್ಮಯ್ಯ ಅವರೊಂದಿಗೆ ತೆರಳಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಭದ್ರತೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.  ಇದೇ ವೇಳೆ ಸಿಟಿ ರವಿ ಸಹ ಇದ್ದು, "ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ್​ಗೆ ಕೆಲವರು ಜೀವ ಬೆದರಿಕೆ ಹಾಕುತ್ತಿದ್ದಾರೆ. ಒಬ್ಬ ಪತ್ರಕರ್ತನಿಗೇ ಹೀಗಾದ್ರೆ ಜನಸಾಮಾನ್ಯರ ಗತಿ ಏನು? ಕೂಡಲೇ ಸಂತೋಷ್ ತಮ್ಮಯ್ಯಗೆ ಸೂಕ್ತ ಭದ್ರತೆ ನೀಡ ಬೇಕು" ಎಂದು ಮನವಿ ಮಾಡಿದ್ದಾರೆ. ಟಿಪ್ಪು ಜಯಂತಿ ವಿರೋಧಿಸುವ ಕಾರ್ಯಕ್ರಮದ ಭಾಷಣದ ವೇಳೆ ಸಂತೋಷ್​ ತಮ್ಮಯ್ಯ ಟಿಪ್ಪುವಿನ ಬಗ್ಗೆ ಟೀಕಿಸಿದ್ದರು. ಹೀಗಾಗಿ ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದರು. ಪೊಲೀಸರ ಕ್ರಮಕ್ಕೆ ರಾಜ್ಯಾದ್ಯಂತ ತೀವ್ರ ಖಂಡನೆ ಕೂಡಾ ವ್ಯಕ್ತವಾಗಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا