Urdu   /   English   /   Nawayathi

ಡ್ರೋನ್‌ಗೆ ಹೊಸ ನಿಯಮ

share with us

ನವದೆಹಲಿ: 01 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ದೇಶದಲ್ಲಿ ಡ್ರೋನ್‌ ಬಳಕೆ ಹೆಚ್ಚಾಗುತ್ತಿದ್ದು ಇದಕ್ಕೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಹೊಸ ನಿಯಮಗಳು ಶನಿವಾರದಿಂದಲೇ ಜಾರಿಯಾಗಲಿವೆ. ಇನ್ನು ಮುಂದೆ ಡ್ರೋನ್‌ ಹಾರಾಟವು ಕೇಂದ್ರ ವಿಮಾನಯಾನ ಮಹಾ ನಿರ್ದೇಶನಾಲಯದ ಅಡಿಯಲ್ಲಿ ಬರಲಿದೆ. ಹೀಗಾಗಿ ಡ್ರೋನ್‌ ಹಾರಿಸುವ ಮುಂಚೆ ಈ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾದದ್ದು ಕಡ್ಡಾಯ. ಅಲ್ಲದೆ ಪ್ರತಿಯೊಂದು ಡ್ರೋನ್‌ಗೂ ವಿಶಿಷ್ಟ ಗುರುತಿನ ಸಂಖ್ಯೆ(ಯುಐಎನ್‌) ಮತ್ತು ಮಾನವ ರಹಿತ ವಿಮಾನ ನಿರ್ವಹಣಾ ಪರವಾನಗಿ( ಯುಎಒಪಿ) ಪಡೆಯ ಬೇಕಾಗುತ್ತದೆ. ಯುಐಎನ್‌ ಪಡೆಯಲು 1 ಸಾವಿರ ರೂ. ಶುಲ್ಕ ಮತ್ತು ಯುಎಒಪಿ ಪಡೆಯಲು 25 ಸಾವಿರ ರೂ.ಗಳ ಶುಲ್ಕ ನಿಗದಿ ಮಾಡಲಾಗಿದೆ. ಇದು 5 ವರ್ಷಗಳ ಅವಧಿಗೆ ಮಾತ್ರವಿದ್ದು, ಮರು ಪರವಾನಗಿ ಮಾಡಿಸಿಕೊಳ್ಳಬೇಕಾದರೆ 10 ಸಾವಿರ ರೂ. ನೀಡಬೇಕು.

ಡ್ರೋನ್‌ಗಳ ತೂಕದ ಆಧಾರದ ಮೇಲೆ ನಾಲ್ಕು ಭಾಗಗಳನ್ನಾಗಿ ಮಾಡಲಾಗಿದೆ. 250 ಗ್ರಾಂ. ಅಥವಾ ಕಾಲು ಕೆಜಿಗಿಂತ ಕಡಿಮೆ ತೂಕದ ಡ್ರೋನ್‌ ಹಾರಾಟಕ್ಕೆ ಅನುಮತಿ ಅಥವಾ ಯುಐಎನ್‌ ಬೇಕಾಗಿಲ್ಲ. ಆದರೆ, ಇದೇ ಡ್ರೋನ್‌ ಅನ್ನು 50 ಅಡಿಗಿಂತ ಮೇಲೆ ಹಾರಿಸಬೇಕಾದರೆ ಅನುಮತಿ ಪಡೆಯು ವುದು ಕಡ್ಡಾಯವಾಗಿದೆ. ಇನ್ನು 250 ಗ್ರಾಂ ನಿಂದ 2 ಕೆಜಿ ವರೆಗಿನ ಡ್ರೋನ್‌ ಗೆ ಕೇವಲ ಯುಐಎನ್‌ ಸಾಕು. ಆದರೆ, 200 ಅಡಿಗಿಂತ ಮೇಲೆ ಹಾರಿಸಬೇಕಾದರೆ ಎರಡೂ ರೀತಿಯ ಪರವಾನಗಿ ಅಗತ್ಯ. 2 ಕೆಜಿಗಿಂತ ಮೇಲಿನ ಎಲ್ಲ ಡ್ರೋನ್‌ಗೆ ಯು ಐಎನ್‌ ಮತ್ತು ಯುಎಒಪಿ ಪಡೆಯುವುದು ಕಡ್ಡಾಯವಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا