Urdu   /   English   /   Nawayathi

ಹಣದ ವಿಚಾರಕ್ಕೆ ಸ್ನೇಹಿತನನ್ನು ಕೊಂದಿದ್ದ 5 ಮಂದಿ ಅರೆಸ್ಟ್

share with us

ಬೆಂಗಳೂರು: 28 ನವೆಂಬರ್ (ಫಿಕ್ರೋಖಬರ್ ಸುದ್ದಿ) ರಸ್ತೆ ಬದಿ ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ಯುವಕನ ಹಿಂಬಾಲಿಸಿ ಬಂದು ಮಚ್ಚು, ಲಾಂಗ್‍ಗಳಿಂದ ಮನಬಂದಂತೆ ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.ಬರ್ಕತ್ ಅಹಮ್ಮದ್(32), ಇಲಿಯಾಸ್ (36), ಮುಬಾರಕ್(32), ಶೇಖ್ ಮೊಹಮ್ಮದ್ ಸಮಿ(31) ಮತ್ತು ಇರ್ಫಾನ್ ಶರೀಫ್(35) ಬಂಧಿತ ಕೊಲೆ ಆರೋಪಿಗಳು. ಬಂಧಿತರಿಂದ  ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು ಹಾಗೂ ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ.

# ಘಟನೆ ವಿವರ:
ಶಿವಾಜಿನಗರದ ನಿವಾಸಿಯಾದ ಸೈಯ್ಯದ್ ಇರ್ಫಾನ್ ಅಕ್ವೇರಿಯಂ ಅಂಗಡಿ ಇಟ್ಟುಕೊಂಡಿದ್ದು, ಈತ ಹೊಸದಾಗಿ ಮನೆ ಕಟ್ಟಿಸುತ್ತಿದ್ದನು. ಮನೆಯನ್ನು ಪರಿಚಯಸ್ಥನಾದ ಇರ್ಫಾನ್ ಶರೀಫ್‍ಗೆ ಕಂಟ್ರಾಕ್ಟ್ ನೀಡಿ 50 ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಿದ್ದನಲ್ಲದೆ, 10 ಲಕ್ಷ ರೂ.ಗಳನ್ನು ಶೇ.30ರಂತೆ ಬಡ್ಡಿಗೆ ನೀಡಿದ್ದನು. ಇರ್ಫಾನ್ ಶರೀಫ್ ಪ್ಲ್ಯಾನ್ ಪ್ರಕಾರ ಸರಿಯಾಗಿ ಮನೆ ಕಟ್ಟದೆ ಹಾಗೂ ಸಾಲದ ಬಡ್ಡಿ ಕೊಡದೆ ಸೈಯ್ಯದ್ ಇರ್ಫಾನ್‍ಗೆ ಸತಾಯಿಸುತ್ತಿದ್ದನು. ಇದರಿಂದ ಸೈಯ್ಯದ್ ಕೋಪಗೊಂಡು ನಿನ್ನ ಕುಟುಂಬದವರನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಈ ವಿಷಯ ಇಷ್ಟಕ್ಕೆ ನಿಲ್ಲದೆ ಸ್ನೇಹಿತ ಬರ್ಕತ್ ಅಹಮ್ಮದ್‍ಗೆ ಇರ್ಫಾನ್ ತಿಳಿಸಿದ್ದಾನೆ. ಈತ ತನ್ನ ಸ್ನೇಹಿತರಾದ ಇಲಿಯಾಸ್, ಮುಬಾರಕ್, ಶೇಖ್ ಮೊಹಮ್ಮದ್ ಸಮಿ ಹಾಗೂ ಮತ್ತಿಬ್ಬರನ್ನು ಸೇರಿಸಿಕೊಂಡು ಸೈಯ್ಯದ್ ಇರ್ಫಾನ್‍ನನ್ನು ಮುಗಿಸಲು ಒಳಸಂಚು ರೂಪಿಸಿದ್ದಾರೆ.ಸೈಯ್ಯದ್ ಇರ್ಫಾನ್ ನ.19 ರಂದು 11 ಗಂಟೆ ಸಮಯದಲ್ಲಿ ಮನೆಯ ಹತ್ತಿರದ ಜ್ಯೂಸ್ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಬೈಕ್‍ನಲ್ಲಿ ಹೊರಗೆ ಹೋಗಿದ್ದನು. ಈ ವಿಷಯ ಅರಿತ ದುಷ್ಕರ್ಮಿಗಳು ಗುಂಪು ಕಟ್ಟಿಕೊಂಡು 11.55ರಲ್ಲಿ ಬಂದು ಓಲ್ಡ್ ಸಿಮೆಂಟ್ ರಸ್ತೆಯಲ್ಲಿ ಸೈಯ್ಯದ್ ಬೈಕ್ ನಿಲ್ಲಿಸಿಕೊಂಡು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಾಗ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಗಂಭೀರ ಗಾಯಗೊಂಡಿದ್ದ ಇರ್ಫಾನ್‍ನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದನು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಇನ್ಸ್‍ಪೆಕ್ಟರ್ ತರ್ಬೇಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡ ಹಲವು ಮಾಹಿತಿಗಳನ್ನು ಕಲೆ ಹಾಕಿ ಸೈಯ್ಯದ್‍ನೊಂದಿಗೆ ವ್ಯವಹಾರ ನಡೆಸುತ್ತಿದ್ದವರನ್ನು ವಿಚಾರಿಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಬರ್ಕತ್ ಅಹಮ್ಮದ್ ಬನಶಂಕರಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಬನಶಂಕರಿಯ ದಿವಾನ್ ಅಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಮತ್ತೊಬ್ಬ ಆರೋಪಿ ಇಲಿಯಾಸ್ ನೆಲಮಂಗಲ ಠಾಣೆಯ ರೌಡಿಶೀಟರ್.ಆರೋಪಿಗಳು ಹೆಲ್ಮೆಟ್ ಧರಿಸಿ ವ್ಯವಸ್ಥಿತವಾಗಿ ಯಾವುದೇ ಸುಳಿವು ನೀಡದೆ ಕೊಲೆ ಮಾಡಿದ್ದು, ತನಿಖಾ ತಂಡದ ಚಾಕಚಕ್ಯತೆಯಿಂದ ಆರೋಪಿಗಳನ್ನು ಬಂಧಿಸುವಲ್ಲಿ ಈ ತಂಡ ಯಶಸ್ವಿಯಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا