Urdu   /   English   /   Nawayathi

ಕೇರಳ: 'ನಿಲ್ಲು ನಿಲ್ಲು ' ಚಾಲೆಂಜ್, ಹುಷಾರ್ ಎಂದ ಪೊಲೀಸರು!

share with us

ಕೊಚ್ಚಿ: 27 ನವೆಂಬರ್ (ಫಿಕ್ರೋಖಬರ್ ಸುದ್ದಿ) ಕಿಕಿ ನೃತ್ಯದ ನಂತರ 'ನಿಲ್ಲು ನಿಲ್ಲು ಚಾಲೆಂಜ್ ' ಕೇರಳದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.'ರೈನ್ ರೈನ್ ಕಮ್ ಅಗೈನ್ ' ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಜೆಸ್ಸಿ ಗಿಪ್ಟ್  ಸಂಯೋಜಿಸಿದ್ದ  ಗೀತೆ ಬರೋಬ್ಬರಿ 15 ವರ್ಷಗಳ ನಂತರ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗುತ್ತಿದೆ. ಟಿಕ್ ಟಾಕ್ ಪ್ರಸಾರ ಆಪ್ ಯುವಜನಾಂಗದಲ್ಲಿ ಹೊಸ ಕ್ರೇಜ್  ಸೃಷ್ಟಿಸಿದ್ದು,ಎಲೆಗಳನ್ನು ತೋರಿಸುತ್ತಾ  ಹಳೆಯ ಗೀತೆಗೆ ಸ್ಟೆಪ್ ಹಾಕುತ್ತಾರೆ. ಬಸ್ , ಸ್ಕೂಟರ್ ಮತ್ತಿತರ ವಾಹನಗಳ ಮುಂದೆ ಎಲೆ ತೋರಿಸುತ್ತಾ ಡ್ಯಾನ್ಸ್ ಮಾಡಿ ನಿಲ್ಲಿಸುತ್ತಾರೆ. ಹಾಸ್ಯ ಎನಿಸಿದ್ದರೂ ಇಂತಹ ವರ್ತನೆ  ಅಪಾಯಕಾರಿ . ವಾಹನಗಳ ಮುಂದೆ ಡ್ಯಾನ್ಸ್ ಮಾಡುತ್ತಾ ಸಂಚಾರಕ್ಕೆ ತೊಂದರೆ ಕೊಡಲು  ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

14 ವರ್ಷಗಳ ಸಂಯೋಜಿಸಿದ್ದ ಗೀತೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ವೇದಿಕೆಗಳಲ್ಲಿ ವೈರಲ್ ಆಗುತ್ತಿರುವುದು ಸಂತಸ ತಂದಿದೆ. ಟಿಕ್ ಟಾಕ್ ವಿಡಿಯೋ ಹಿಂದಿರುವ ಹಾಸ್ಯದ ಅಂಶವನ್ನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಜೆಸ್ಸಿ ಗಿಪ್ಟ್ ಎಕ್ಸ್ ಪ್ರೆಸ್ ಜೊತೆಗೆ ಹೇಳಿದ್ದಾರೆ. ನಿಲ್ಲು ನಿಲ್ಲು ಗೀತೆಯನ್ನು ಜೆಸ್ಸಿ ಗಿಪ್ಟ್ ಅವರೇ ಹಾಡಿದ್ದು,. ಆ ಗೀತೆ ಸೃಷ್ಟಿಸಿಯಾದ ಸಂದರ್ಭದಲ್ಲಿ ವೈರಲ್ ಅಂತಾ ಶಬ್ದ ಕೂಡಾ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

https://youtu.be/C-MYMfskHC0

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا