Urdu   /   English   /   Nawayathi

ರೈಲಿನಲ್ಲಿ ಮೂವರು ದರೋಡೆಕೋರರ ಬಂಧನ, ರೈಲಿನಿಂದ ಜಿಗಿದು ಅಡಗಿದವನಿಗಾಗಿ ಶೋಧನೆ

share with us

ಅಂಕೋಲಾ: 25 ನವೆಂಬರ್ (ಫಿಕ್ರೋಖಬರ್ ಸುದ್ದಿ) ಶುಕ್ರವಾರದಂದು ಕುಮಟಾದಲ್ಲಿ ಜಿಲ್ಲಾ ಪೋಲೀಸರು ಮಧ್ಯಪ್ರದೇಶ ಮೂಲದ ದರೋಡೆಕೋರರ ತಂಡವನ್ನು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ದರೋಡೆಕೋರರು ಮಧ್ಯಪ್ರದೇಶ ಹಾಗೂ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಗಳಲ್ಲಿ ದರೋಡೆ ಮಾಡಿದ್ದು, ಮಧ್ಯಪ್ರದೇಶದ ಪೋಲೀಸರು ಉತ್ತರಕನ್ನಡ ಜೆಲ್ಲೆಯ ಪೋಲೀಸರಿಗೆ ಮಾಹಿತಿ ನೀಡಿದ ನಂತರ ಪೋಲೀಸರು ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ. ದರೋಡೆಕೋರರ ತಂಡವೊಂದು ಉತ್ತರ ಕನ್ನಡ ಜೆಲ್ಲೆಯ ಮೂಲಕ ರೈಲಿನಲ್ಲಿ ತೆರಳುವ ಸುದ್ದಿ ತಿಳಿದ ಜಿಲ್ಲಾ ಪೋಲೀಸರು ಇವರನ್ನು ಹಿಡಿಯಲು ರೈಲಿನಲ್ಲಿ ಹುಡುಕಾಟ ನಡೆಸುವ ವೇಳೆ ಇಬ್ಬರು ಕೈಗೆ ತಗುಲಿದ್ದು, ಬೇರೆ ಬೇರೆ ಬೋಗಿಗಳಲ್ಲಿ ಕುಳಿತಿದ್ದ ಉಳಿದ ಖದೀಮರು ತಮ್ಮ ಜೊತೆಗಾರನನ್ನು ಪೋಲೀಸರು ಬಂಧಿಸಿರುವುದನ್ನು ತಿಳಿಯದೇ ಅದೇ ರೈಲಿನಲ್ಲಿ  ಪ್ರಯಾಣ ಮುಂದುವರೆಸಿದ್ದರು. ಅಂಕೋಲಾ ಹಾರವಾಡದಲ್ಲಿ ಪೋಲೀಸರು ರೈಲು ಹತ್ತಿದ್ದನ್ನು ಕಂಡ ಒಬ್ಬ ಖದೀಮ ರೈಲಿನಿಂದ ಹೊರಗೆ ಜಿಗಿದು ಪಕ್ಕದಲ್ಲಿದ್ದ ಕೆರೆಯನ್ನು ದಾಟಿ ಅರಣ್ಯ ಪ್ರದೇಶದಲ್ಲಿ ಸಿಲುಕಿದ್ದಾನೆ ಎಂದು ತಿಳಿದು ಬಂದಿದೆ. ಅರಣ್ಯದಲ್ಲಿ ಅಡಗಿ ಕುಳಿತಿರುವ ಆರೋಪಿಯನ್ನು ಬಂಧಿಸಲು ಪೋಲೀಸರು ಬಲೆ ಬೀಸಿದ್ದು, ಶೋಧನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನು ತಿಳಿಯದ ಮತ್ತೊಬ್ಬ ಆರೋಪಿ ಮುಂದಿನ ಪ್ರಯಾಣ ಬೆಳೆಸಿದ್ದು, ಆತನನ್ನು ಕಾರವಾರದ ಪೋಲೀಸರು ಬಂಧಿಸಿದ್ದಾರೆ. ಒಟ್ಟು ಮೂವರನ್ನು ಬಂಧಿಸಿ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا