Urdu   /   English   /   Nawayathi

ಮೃತದೇಹ ಸಿಗೋದು ಡೌಟು

share with us

ಪೋರ್ಟ್‌ ಬ್ಲೇರ್‌: 25 ನವೆಂಬರ್ (ಫಿಕ್ರೋಖಬರ್ ಸುದ್ದಿ) ಅಂಡಮಾನ್‌ ಸಮೀಪದ ಸೆಂಟಿನೆಲ್‌ ದ್ವೀಪದಲ್ಲಿ ಇತ್ತೀಚೆಗೆ ಆದಿವಾಸಿಗಳಿಂದ ಹತ್ಯೆಗೀಡಾದ ಅಮೆರಿಕದ ಧರ್ಮ ಪ್ರಚಾರಕ ಜಾನ್‌ ಅಲೆನ್‌ ಚೌ ಮೃತ ದೇಹದ ಅವಶೇಷಗಳನ್ನು ಆದಷ್ಟು ಬೇಗನೇ ಪಡೆಯುವ ಒತ್ತಡದಲ್ಲಿ ಪೊಲೀಸ್‌ ಇಲಾಖೆ ಸಿಲುಕಿದೆ. ನ. 17ರಂದು ಜಾನ್‌ ಹತ್ಯೆಯಾಗಿದ್ದು, ಈಗಾಗಲೇ ಅವರನ್ನು ದ್ವೀಪದ ಸಾಗರ ತೀರದ ಒಂದು ಕಡೆ ಆದಿವಾಸಿಗಳು ಹೂತಿದ್ದು, ಕೆಲ ದಿನಗಳ ನಂತರ ಆ ದೇಹ ಹೊರ ತೆಗೆದು ಅದರ ಅವಶೇಷಗಳನ್ನು ಶಾಶ್ವತವಾಗಿ ದ್ವೀಪದಿಂದ ನಿರ್ಮೂಲನೆ ಮಾಡುವ ಕ್ರಮವನ್ನು ಕೆಲ ಆದಿವಾಸಿಗಳು ಹೊಂದಿರುತ್ತಾರೆಂದು ನಾನಾ ಆದಿವಾಸಿ ಸಂಪ್ರದಾಯಗಳ ಬಗ್ಗೆ ಜ್ಞಾನವುಳ್ಳ ತಜ್ಞರು ಹೇಳಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. 

ಈಗ ಹೊಸತೊಂದು ಯೋಜನೆ ರೂಪಿಸಲಾಗಿದ್ದು, ಮಾನವ ಶಾಸ್ತ್ರಜ್ಞರು ಹಾಗೂ ಆದಿವಾಸಿ, ಬುಡಕಟ್ಟು ಸಂಪ್ರದಾಯಗಳ ತಜ್ಞರುಳ್ಳ ಸುಮಾರು 15-20 ಜನರ ತಂಡವೊಂದನ್ನು ಕರಾವಳಿ ರಕ್ಷಣಾ ಪಡೆಯ ನೌಕೆಯಲ್ಲಿ ಸಕಲ ಭದ್ರತೆಯೊಂದಿಗೆ ದ್ವೀಪಕ್ಕೆ ತೆರಳಿ, ಆದಿವಾಸಿಗಳ ಜತೆಗೆ ಸಂಪರ್ಕಕ್ಕಾಗಿ ಪ್ರಯತ್ನಿಸಲು ತೀರ್ಮಾನಿಸಲಾಗಿದೆ. ಈ ತಂಡದಲ್ಲಿ, ಜಾನ್‌ ಅವರನ್ನು ದ್ವೀಪದವರೆಗೆ ಕೊಂಡೊಯ್ದಿದ್ದ ಕಾರಣಕ್ಕೆ ಬಂಧನಕ್ಕೊಳಗಾಗಿರುವ ಏಳು ಮೀನುಗಾರರೂ ಇರಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا