Urdu   /   English   /   Nawayathi

ಹಾಶೀಮ್‌ಪುರ ನರಮೇಧ ಪ್ರಕರಣ: ನಾಲ್ವರು ಜವಾನರು ದಿಲ್ಲಿ ಕೋರ್ಟಿಗೆ ಶರಣು

share with us

ಹೊಸದಿಲ್ಲಿ: 22 ನವೆಂಬರ್ (ಫಿಕ್ರೋಖಬರ್ ಸುದ್ದಿ)1987ರ ಹಾಶೀಮ್‌ಪುರ ನರಮೇಧ ಕೇಸಿನಲ್ಲಿ ದೋಷಿಗಳೆಂದು ಘೋಷಿಸಲ್ಪಟ್ಟಿದ್ದ  ಉತ್ತರ ಪ್ರದೇಶ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬುಲರಿ ಪಡೆಯ (ಯುಪಿಪಿಎಸಿ) 15 ಮಂದಿ ಜವಾನರ ಪೈಕಿ ನಾಲ್ಕು ಮಂದಿ ಇಂದು ಗುರುವಾರ ದಿಲ್ಲಿಯ ತೀಸ್‌ ಹಜಾರಿ ನ್ಯಾಯಾಲಯಕ್ಕೆ ಶರಣಾದರು. ಎಎನ್‌ಐ ಮಾಡಿರುವ ವರದಿಯ ಪ್ರಕಾರ ಈ ನಾಲ್ವರು ಯುಪಿ ಪಿಎಸಿ ಜವಾನರನ್ನು ತಿಹಾರ್‌ ಜೈಲಿಗೆ ಕಳುಹಿಸಲಾಗುವುದು. ತೀಸ್‌ ಹಜಾರಿ ನ್ಯಾಯಾಲಯವು ಉಳಿದ ಜವಾನರ ವಿರುದ್ದ ಜಾಮೀನು ರಹಿತ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದೆ.

1987ರ ಹಾಶೀಮ್‌ಪುರ ನರಹತ್ಯೆ ಕೇಸ್‌ ಎಂದು ಅನಂತರದಲ್ಲಿ ತಿಳಿಯಲ್ಪಟ್ಟಿರುವ, ಉತ್ತರ ಪ್ರದೇಶದ ಅಲ್ಪಸಂಖ್ಯಾಕ ಸಮುದಾಯದ 42 ಮಂದಿಯನ್ನು ಕೊಂದ ಪ್ರಕರಣದ ಅಪರಾಧಕ್ಕಾಗಿ ದಿಲ್ಲಿ ಹೈಕೋರ್ಟ್‌ ಕಳೆದ ಅ.31ರಂದು 16 ಪೊಲೀಸರಿಗೆ ಜೀವಾವಧಿ ಜೈಲು ಶಿಕ್ಷೆ ಪ್ರಕಟಿಸಿತ್ತು. ನಿರಸ್ತ್ರ ಮತ್ತು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲಾಗದ ಜನರನ್ನು ಗುರಿ ಇರಿಸಿ ನಡೆಸಲಾದ ನರಮೇಧ ಇದು ಹೈಕೋರ್ಟ್‌ ಹೇಳಿತು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا