Urdu   /   English   /   Nawayathi

ಪಂಜಾಬ್‌ ಗ್ರನೇಡ್ ದಾಳಿ: ವ್ಯಕ್ತಿಯೊಬ್ಬನ ಬಂಧನ

share with us

ಚಂಡೀಗಡ: 21 ನವೆಂಬರ್ (ಫಿಕ್ರೋಖಬರ್ ಸುದ್ದಿ) ಪಂಜಾಬ್‌ನ ಅಮೃತಸರದಲ್ಲಿ ನಿರಂಕಾರಿ ಪಂಥದ ಪ್ರಾರ್ಥನಾ ಮಂದಿರದ ಮೇಲೆ ನಡೆದ ಗ್ರನೇಡ್ ದಾಳಿ ಸಂಬಂಧ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಾಳಿಗೆ ಬಳಕೆಯಾದ ಗ್ರನೇಡ್ ಪಾಕಿಸ್ತಾನಕ್ಕೆ ಸಂಬಂಧಿಸಿದ್ದು. ಇದರಲ್ಲಿ  ಪಾಕಿಸ್ತಾನದ ಐಎಸ್ಐ ಉಗ್ರರ ಕೈವಾಡವಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನದ ಐಎಸ್‌ಐ ಉಗ್ರ ಸಂಘಟನೆ ಭಾಗಿಯಾಗಿದೆ. ಇದರ ಉದ್ದೇಶ ನಮ್ಮ ರಾಜ್ಯದಲ್ಲಿ ಶಾಂತಿ ಕದಡುವುದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಅಮೃತಸರದ ಹೊರವಲಯದಲ್ಲಿರುವ ನಿರಂಕಾರಿ ಭವನದಲ್ಲಿ ಧಾರ್ಮಿಕ ಸಭೆಯ ಕಾರಣಕ್ಕೆ ಭಕ್ತಾದಿಗಳು ಸೇರಿದ್ದರು. ಈ ವೇಳೆ ನಡೆದ ಗ್ರನೇಡ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. 20 ಮಂದಿ ಗಾಯಗೊಂಡಿದ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا