Urdu   /   English   /   Nawayathi

99 ವರ್ಷ ಜೈಲು ಶಿಕ್ಷೆಯಿಂದ ಯುವಕನನ್ನು ಪಾರುಮಾಡಿದ ಸೆಲ್ಫಿ..!

share with us

ಟೆಂಪಲ್, ಟೆಕ್ಸಾಸ್: 21 ನವೆಂಬರ್ (ಫಿಕ್ರೋಖಬರ್ ಸುದ್ದಿ) ಮೊಬೈಲ್ ಫೋನ್‍ನ ಸೆಲ್ಫಿ ಘೀಳಿನಿಂದ ಸಾವು-ನೋವುಗಳು ಸಂಭವಿಸುತ್ತಿರುವ ಕೆಟ್ಟ ಘಟನೆಗಳ ನಡುವೆಯೇ ಇದರಿಂದ ಒಳ್ಳೆಯದೂ ಆಗುತ್ತದೆ ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನವಿದೆ. ಪ್ರೇಯಸಿ ಮೇಲೆ ಹಲ್ಲೆ ನಡೆಸಿ 99 ವರ್ಷಗಳ ಕಾಲ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದ ಯುವಕನೊಬ್ಬ ತಾನು ಆ ಕೃತ್ಯ ನಡೆಸಿಲ್ಲ ಎಂಬುದನ್ನು ಫೇಸ್‍ಬುಕ್ ಸೆಲ್ಫಿ ಮೂಲಕ ಸಾಬೀತು ಪಡಿಸಿ ಜೀವನ ಪರ್ಯಂತ ಕಂಬಿ ಎಣಿಸುವುದರಿಂದ ಪಾರಾಗಿದ್ದಾನೆ. ಈ ಘಟನೆ ನಡೆದಿರುವುದು ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಟೆಂಪಲ್ ನಗರದಲ್ಲಿ. ಕಿಸ್ಟೋಫರ್‍ಪ್ರಿಕೋಪಿಯ ತನ್ನ ಮನಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿದ ಎಂದು ಆತನ ಮಾಜಿ ಪ್ರಿಯತಮೆ ಆರೋಪಿಸಿದ್ದಳು. 

ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ಪೊಲೀಸರು, ಕೋರ್ಟ್‍ನಲ್ಲಿ ಕಿಸ್ಟೋಫರ್ ವಿರುದ್ಧ ದಾವೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಕಿಸ್ಟೋಫರ್‍ಗೆ ತಾತ್ಕಾಲಿಕ ಜೈಲು ಶಿಕ್ಷೆ ವಿಧಿಸಿತ್ತು. ಇದಕ್ಕಾಗಿ ಆತನ ಪೊಷಕರು 1.5ಲಕ್ಷ ಡಾಲರ್ ಮೊತ್ತದ ಜುಲ್ಮಾನೆಯನ್ನೂ ಸಹ ಪಾವತಿಸಿದ್ದರು. ಆದರೆ, ತಾನು ಆ ಕೃತ್ಯ ಎಸಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಕಿಸ್ಟೋಫರ್, ಆ ಸಮಯದಲ್ಲಿ ತಾನು ಆ ಸ್ಥಳದಲ್ಲಿರಲಿಲ್ಲ. ಘಟನೆ ನಡೆದ 63 ಮೈಲಿ ದೂರದ ಹೋಟೆಲ್‍ನಲ್ಲಿ ಇದ್ದುದಾಗಿಯೂ, ಅದಕ್ಕೆ ತಾನು ತನ್ನ ಗೆಳೆಯರೊಂದಿಗೆ ಇರುವ ಸೆಲ್ಫಿಯೆ ಸಾಕ್ಷಿ ಎಂದು ಫೇಸ್‍ಬುಕ್ ಮೂಲಕ ಸೆಲ್ಫಿ ಫೋಟೋ ಸಮೇತ ಶೇರ್ ಮಾಡಿದ್ದ.

ಇದನ್ನು ಪರಿಗಣಿಸಿದ ಪೊಲೀಸರು ಕೂಲಂಕಷ ತನಿಖೆ ನಡೆಸಿದಾಗ ಕ್ರಿಸ್ಟೋಫರ್ ಪ್ರಿಯತಮೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಆ ಸಮಯದಲ್ಲಿ ಆತ ಬಹುದೂರದ ಸ್ಥಳದಲ್ಲಿದ್ದ ಎಂಬುದು ಬಲವಾದ ಸಾಕ್ಷಾಧಾರಗಳಿಂದ ಸಾಬೀತಾಯಿತು. ಹೀಗಾಗಿ ಈತ ಕೋರ್ಟ್ ವಿಧಿಸುತ್ತಿದ್ದ 99 ವರ್ಷಗಳ ಶಿಕ್ಷೆಯಿಂದ ಪಾರಾಗಿದ್ದಾನೆ. ಸೆಲ್ಫಿಯ ಒಂದೇ ಒಂದು ಫೋಟೋ  ಈತ ಜೈಲಿನಲ್ಲಿ ಕೊಳೆಯುವುದನ್ನು ತಪ್ಪಿಸಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا