Urdu   /   English   /   Nawayathi

ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಆರ್ಟಿಲರಿ ಶೆಲ್ ಹೊರತೆಗೆಯುವಾಗ ಸಂಭವಿಸಿದ ಸ್ಫೋಟವೇ ದುರಂತಕ್ಕೆ ಕಾರಣ!

share with us

ವಾರ್ಧಾ: 20 ನವೆಂಬರ್ (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದ ಪುಲ್ ಗಾಂವ್ ಸೇನಾ ಡಿಪೋದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಆರ್ಟಿಲರಿ ಶೆಲ್ ಹೊರತೆಗೆಯುವಾಗ ಸ್ಫೋಟ ಸಂಭವಿಸಿದ್ದೇ ದುಂರಂತಕ್ಕೆ ಕಾರಣ ಎಂದು ಸೇನಾ ಮೂಲಗಳು ತಿಳಿಸಿವೆ. ಮಹಾರಾಷ್ಟ್ರದ ಪುಲ್ ಗಾಂವ್ ಸೇನಾ ಡಿಪೋದಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ಶಸ್ತ್ರಾಸ್ತ್ರ ನಿರ್ಮಾಣ ಕಾರ್ಖಾನೆಯ ಉದ್ಯೋಗಿ ಹಾಗೂ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಪೈಕಿ ನಾಲ್ಕು ಮಂದಿ ಸ್ಫೋಟ ಸಂಭವಿಸಿದ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅಂತೆಯೇ ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸೇನಾ ಮೂಲಗಳು ತಿಳಿಸಿರುವಂತೆ 23 ಎಂಎಂ ಫಿರಂಗಿಯನ್ನು ವಿಲೇವಾರಿಗಾಗಿ ಕೆಳಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಫಿರಂಗಿಯನ್ನು ನಾಗ್ಪುರದಿಂದ 80 ಕಿ.ಮೀ. ದೂರದ ಪುಲ್ ಗಾಂವ್ ಸೇನಾ ಡಿಪೋದಿಂದ ವಿಶಾಲ ಮೈದಾನಕ್ಕೆ ಕೊಂಡೊಯ್ಯಲಾಗಿತ್ತು. ಈ ವೇಳೆ ಅವಧಿ ಮುಗಿದ ಶೆಲ್ ಸ್ಛೋಟಗೊಂಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಮಧ್ಯಪ್ರದೇಶ ಮೂಲದ ಫಿರಂಗಿ ಫ್ಯಾಕ್ಟರಿಗೆ ಸ್ಫೋಟಕಗಳ ವಿಲೇವಾರಿಗೆ ಈ ಸ್ಥಳವನ್ನು ನೀಡಲಾಗಿತ್ತು ಎಂದು ವರದಿ ಮಾಡಿದೆ.

ಇನ್ನು 2016ರಲ್ಲಿ ಇದೇ ಪುಲ್ ಗಾಂವ್ ಸೇನಾ ಡಿಪೋದಲ್ಲಿ ಇಂತಹುದೇ ದುರ್ಘಟನೆ ಸಂಭವಿಸಿ 16 ಮಂದಿ ಸಿಬ್ಬಂದಿ ಸಾವಿಗೀಡಾಗಿದ್ದರು.

ANI✔@ANI

While carrying out demolition of old explosives by the staff of Ordnance factory Khamaria,Jabalpur at the demolition land in Pulgaon there was an accident. In the incident 3 labourers & 1 staff of ordnance lost lives: BB Pande, Defence PRO Nagpur on Pulgaon explosion

31

10:24 AM - Nov 20, 2018

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا