Urdu   /   English   /   Nawayathi

ಹೈಟೆಕ್ ಕಳ್ಳ: ಕದಿಯುವ ಸಲುವಾಗಿಯೇ ಟಿಕೆಟ್ ಪಡೆದು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಕದೀಮ ಅಂದರ್!

share with us

ಕೋಲ್ಕತ್ತಾ: 20 ನವೆಂಬರ್ (ಫಿಕ್ರೋಖಬರ್ ಸುದ್ದಿ) ವಿಮಾನಯಾನ ಸಂಸ್ಥೆಗಳು ನೀಡುವ ಕಡಿಮೆ ಬೆಲೆಯ ಟಿಕೆಟ್ ಆಫರ್ ಗಳನ್ನೇ ಬಳಸಿಕೊಂಡು ಕದೀಮನೊಬ್ಬ ವಿಮಾನ ಪ್ರಯಾಣದ ಟಿಕೆಟ್ ಪಡೆದು ಪ್ರಯಾಣಿಕನ ಸೋಗಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದು ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದವನ ಅಸಲಿ ಕಥೆ. ಜಾರ್ಖಂಡ್ ಮೂಲದ 45 ವರ್ಷದ ಸಾಜೀದ್ ಹುಸೇನ್ ಬಂದಿತ ಕಳ್ಳ. ಇತ ವಿಮಾನ ನಿಲ್ದಾಣಕ್ಕೆ ಬಂದು ಪ್ರಯಾಣಿಕರ ಬ್ಯಾಗ್, ಪರ್ಸ್ ಅಥವಾ ಇನ್ನಿತರ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದ ಎಂದು ತಿಳಿದುಬಂದಿದೆ. 

ಕಳೆದ ಭಾನುವಾರ ಆತನ ನಸೀಬು ಕೈಕೊಟ್ಟಿತ್ತು ಅನಿಸುತ್ತದೆ. ಹೀಗಾಗಿ ಕೊಲ್ಕತ್ತಾ ಪೊಲೀಸರ ಅತಿಥಿಯಾಗಿದ್ದಾನೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸಾಜಿದ್ ಪರ್ಸ್, ಕಿವಿ ಓಲೆ, ಚಿನ್ನದ ಸರ ಮತ್ತು 3,500 ರುಪಾಯಿ ನಗದನ್ನು ಪ್ರಯಾಣಿಕರೊಬ್ಬರಿಂದ ಕದ್ದಿದ್ದಾನೆ. ಸಾಜಿದ್ ಕೆಲ ತಿಂಗಳುಗಳಿಂದ ಪಾಟ್ನಾ ಹಾಗೂ ಕೊಲ್ಕತ್ತಾ ವಿಮಾನ ನಿಲ್ದಾಣಗಳಲ್ಲಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 5ರಂದು ಸಾಜಿದ್ ಮಹಿಳಾ ಪ್ರಯಾಣಿಕರ ಬ್ಯಾಗ್ ನಿಂದ ಪರ್ಸ್ ಕದಿಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಅಂತೆ ಕಳೆದ ಭಾನುವಾರ ವಿಮಾನ ನಿಲ್ದಾಣಕ್ಕೆ ಸಾಜಿದ್ ಬರುತ್ತಿದ್ದಂತೆ ಆತನನ್ನ ಬಂಧಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا