Urdu   /   English   /   Nawayathi

ರ್ಯಾಲಿ ರದ್ದು ಮಾಡಿದರೆ ರೂ.25 ಲಕ್ಷ ಕೊಡುತ್ತೇನೆಂದಿತ್ತು ಕಾಂಗ್ರೆಸ್: ಓವೈಸಿ

share with us

ನಿರ್ಮಲ್ (ತೆಲಂಗಾಣ): 20 ನವೆಂಬರ್ (ಫಿಕ್ರೋಖಬರ್ ಸುದ್ದಿ) ತೆಲಂಗಾಣ ರಾಜ್ಯದ ನಿರ್ಮಲ್ ನಗರದಲ್ಲಿ ರ್ಯಾಲಿ ರದ್ದು ಮಾಡಿದರೆ, ರೂ.25 ಲಕ್ಷ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ರ್ಯಾಲಿ ರದ್ದು ಮಾಡಲು ಕಾಂಗ್ರೆಸ್ ರೂ.25 ಲಕ್ಷ ನೀಡುವುದಾಗಿ ತಿಳಿಸಿತ್ತು. ನೀವು ನಮಗೇನು ಕೊಡುತ್ತೀರಿ? ನಾವು ತಾಜ್ ಮಹಲ್ ನಿರ್ಮಿಸಿದೆವು. ಆ ಆಸ್ತಿಯನ್ನು ನೀವು ಕೊಡುತ್ತೀರಾ? ಕಾಂಗ್ರೆಸ್ ನಾಯಕರಂತೆ ನಾನಲ್ಲ. ನನ್ನದನ್ನು ನಾನು ಎಂದಿಗೂ ಮಾರುವುದಿಲ್ಲ. ನನ್ನ ಜನರ ಹಿತಾಸಕ್ತಿಗಾಗಿ ದುಡಿಯುವುದನ್ನು ನಾನು ನಂಬಿದ್ದೇನೆಂದು ಹೇಳಿದ್ದಾರೆ. 

ಭಾರತದ ಪ್ರತೀ ಮೂಲೆಯಲ್ಲೂ ನಮ್ಮ ಧ್ವಜ ಹಾರಾಡುವುದನ್ನು ನಾನು ನೋಡಲು ಬಯಸುತ್ತೇನೆ. ದೇಶದ ಪ್ರತೀ ಮೂಲೆಯಲ್ಲಿರುವ ಯುವಕರ ಅಭಿವೃದ್ಧಿ, ಪ್ರಗತಿ ನೋಡಲು ಇಚ್ಛಿಸುತ್ತೇನೆ. ರ್ಯಾಲಿಗೆ ನಾನು ಇಲ್ಲಿಗೆ ಬಂದಾಗ ನನ್ನನ್ನು ನೋಡಲು ಇಲ್ಲಿಗೆ ಬಂದಿರುವ ನೂರಾರು ಸಂಖ್ಯೆಯ ಯುವಕರಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ. ಈ ರೀತಿಯ ಶಕ್ತಿ ಸೃಷ್ಟಿಸಲು ನಾನು ಬಯಸಿದ್ದೆ ಎಂದು ತಿಳಿಸಿದ್ದಾರೆ. 

ಕಾಂಗ್ರೆಸ್ ನಾಯಕರಿಗೆ ತಮ್ಮ ಆಸ್ತಿ ಮೇಲೆ ಸಾಕಷ್ಟು ಹೆಮ್ಮೆಯಿದೆ. ನೀವು ನಮಗೇನು ಕೊಟ್ಟಿದ್ದೀರಿ? ತಾಜ್ ಮಹಲ್ ನಿರ್ಮಾಣ ಮಾಡಿದೆವು. ಅದನ್ನು ನೀವು ನೀಡುತ್ತೀರಾ? ಚಾರ್ಮಿನಾರ್, ಜಮ್ಮಾ ಮಸೀದಿ, ನಿರ್ಮಲ್ ನಗರದಲ್ಲಿ ಕುತುಬ್ ಮಿನಾಲ್ ನಿರ್ಮಾಣ ಮಾಡಿದೆವು, ದೇಶದ ಪ್ರತೀ ಮೂಲೆಯಲ್ಲಿ ನಮ್ಮ ಅಸ್ತಿತ್ವ ಗಟ್ಟಿಯಾಗಿದೆ. ರ್ಯಾಲಿ ರದ್ದುಗೊಳಿಸಲು ಕಾಂಗ್ರೆಸ್ ನನಗೆ ರೂ.25 ಲಕ್ಷ ನೀಡುವುದಾಗಿ ತಿಳಿಸಿತ್ತು. ಇದೇ ಅವರ ಹಾಗೂ ನಮ್ಮ ನಡುವಿನ ವ್ಯತ್ಯಾಸ. ಇದು ಅವರ ಹೆಮ್ಮೆಯ ಚಿನ್ಹೆ ಎಂದು ಕಿಡಿಕಾರಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا