Urdu   /   English   /   Nawayathi

ಶಾಂಘೈ:ವಿಶ್ವದ ಮೊದಲ ನೆಲಮಾಳಿಗೆ ಹೋಟೆಲ್‌:ಭೂಗರ್ಭದಲ್ಲಿ ರೆಸಾರ್ಟ್‌!

share with us

ಶಾಂಘೈ: 20 ನವೆಂಬರ್ (ಫಿಕ್ರೋಖಬರ್ ಸುದ್ದಿ) ವಿಶ್ವದ ಮೊಟ್ಟ ಮೊದಲ ನೆಲ ಮಾಳಿಗೆ ಯಲ್ಲಿನ ಐಷಾರಾಮಿ ಹೊಟೇಲ್‌ಗ‌ಳಿಂದ ಕೂಡಿದ 10 ವರ್ಷಗಳ ನಿರಂತರ ಕಾಮಗಾರಿ ಪೂರ್ಣಗೊಳಿಸಿ, ಈಗ ಸೇವೆಗೆ ಮುಕ್ತ ವಾಗಿದೆ. ಚೀನಿಗರ ಮಹತ್ವಾಕಾಂಕ್ಷೆಯ ಯೋಜನೆ ಗಳಲ್ಲಿ ಒಂದಾದ ಈ ಕಟ್ಟಡ ಬೃಹತ್‌ ಕ್ವಾರಿ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಈ ತಿಂಗಳು ಪ್ರಾಯೋಗಿಕ ನಿರ್ವಹಣೆ ಆಗಲಿದ್ದು, ಇಲ್ಲಿನ ಐಷಾರಾಮಿ ಕೊಠಡಿಗಳನ್ನು ಪ್ರವಾಸಿಗರಿಗೆ ನೀಡಲಾಗುತ್ತಿದೆ. ಭೂಮಿಯ ಒಳಭಾಗದಲ್ಲಿ ನಿರ್ಮಾಣ ಗೊಂಡಿ ರುವ ಏಕೈಕ ಐಷಾರಾಮಿ ರೆಸಾರ್ಟ್‌ ಎನ್ನುವ ಹೆಗ್ಗಳಿಕೆ ಇದರದ್ದಾಗಿದೆ. 300 ಅಡಿ ಯಷ್ಟು ಆಳದ ಕ್ವಾರಿ ಪ್ರದೇಶವನ್ನೇ ಬಳಸಿ ಕೊಂಡು ಕಟ್ಟಡದ ವಿನ್ಯಾಸ ಮಾಡ ಲಾಗಿದೆ. ಬುರ್ಜ್‌ ಅಲ್‌ ಅರಬ್‌ ಕಟ್ಟಡದ ವಿನ್ಯಾಸಕ ಮಾರ್ಟಿನ್‌ ಜಾಕ್‌ಮನ್‌ ವಿನ್ಯಾಸ ಮಾಡಿದ್ದಾರೆ.ಒಟ್ಟು 2 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ.

ಎಲ್ಲಿದೆ ರೆಸಾರ್ಟ್‌?
 ಶಾಂಘೈನಿಂದ ಹೆಚ್ಚುಕಡಿಮೆ 32 ಕಿಲೋ ಮೀಟರ್‌ ದೂರದ ಸಾಂಗ್‌ಜಿಯಾಂಗ್‌ ಜಿಲ್ಲಿಯಲ್ಲಿರುವ ಈ ರೆಸಾರ್ಟ್‌ 18 ಮಹಡಿಗಳಿಂದ ಕೂಡಿದೆ. ಭೂ ಮೇಲ್ಪದರದಿಂದ ಕೆಳಕ್ಕೆ 16 ಮಹಡಿಗಳಿದ್ದು, ಇವುಗಳಲ್ಲಿ 2 ಮಹಡಿಗಳು ಅಕ್ವೇರಿಯಂನಿಂದ ಕೂಡಿದೆ. 300ಕ್ಕೂ ಹೆಚ್ಚು ಐಷಾರಾಮಿ ಕೊಠಡಿಗಳಿಂದ ಕೂಡಿದೆ.

ಹೌಸ್‌ಫ‌ುಲ್‌:  ಪ್ರವಾಸಿಗರ ಸೇವೆಗೆ ಮುಕ್ತವಾಗಿ ಸಿದ ಕೆಲವು ದಿನಗಳಲ್ಲೇ ನವೆಂಬರ್‌ ತಿಂಗಳಿನ ಎಲ್ಲಾ ದಿನಗಳಲ್ಲೂ ಕಾಯ್ದಿರಿಸಲಾಗಿದೆ. ಡಿಸೆಂಬರ್‌ನಲ್ಲಿ ಲಭ್ಯವಿದೆ. ಒಂದು ಹಾಸಿಗೆಯಿಂದ ಕೂಡಿದ ಕೊಠಡಿಯ ಒಂದು ದಿನದ ಬಾಡಿಗೆ 39,000 ರೂ. ಆಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا