Urdu   /   English   /   Nawayathi

ಅಮೆರಿಕಾದೊಂದಿಗೆ ಉಗ್ರರ ವಿರೋಧಿ ಹೋರಾಟಕ್ಕೆ ಕೈ ಜೋಡಿಸಿದ್ದಕ್ಕೆ ನಮಗೇ ನಷ್ಟವಾಗಿದೆ: ಇಮ್ರಾನ್ ಖಾನ್

share with us

ಇಸ್ಲಾಮಾಬಾದ್: 20 ನವೆಂಬರ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿಲ್ಲ, ಭಯೋತ್ಪಾದನೆ ವಿಷಯದಲ್ಲಿ ಅಮೆರಿಕಗೆ ಯಾವುದೇ ಸಹಕಾರವನ್ನೂ ನೀಡಿಲ್ಲ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕ ಅಫ್ಘಾನಿಸ್ತಾನದಲ್ಲಿ ತನ್ನ ವೈಫಲ್ಯಕ್ಕೆ ಪಾಕಿಸ್ತಾನವನ್ನು ಬಲಿಪಶು ಮಾಡುವ ಬದಲು, ತಾಲಿಬಾನ್ ಹಿಂದೆಂದಿಗಿಂತಲೂ ಏಕೆ ಬಲಿಷ್ಠವಾಗಿದೆ ಎಂಬುದನ್ನು ಅಮೆರಿಕ ಅರಿಯಬೇಕಾಗಿದೆ ಎಂದು ಹೇಳಿದ್ದಾರೆ.  
ಪಾಕಿಸ್ತಾನಕ್ಕೆ ಅಮೆರಿಕದಿಂದ ಸಿಗುತ್ತಿದ್ದ ಆರ್ಥಿಕ ನೆರವಿಗೆ ಕಡಿವಾಣ ಹಾಕಿರುವ ಕ್ರಮವನ್ನು ಸಮರ್ಥನೆ ಮಾಡಿಕೊಂಡು ಟ್ರಂಪ್ ಟ್ವೀಟ್ ಮಾಡಿದ ಬೆನ್ನಲ್ಲೆ ಇಮ್ರಾನ್ ಖಾನ್ ಸಹ ಟ್ವೀಟ್ ಮಾಡಿದ್ದು, ಪಾಕ್ ವಿರುದ್ಧ ಟ್ರಂಪ್ ಆರೋಪಗಳಿಗೆ ನೇರವಾಗಿ ದಾಖಲೆಗಳನ್ನು ನೀಡಬೇಕಿದೆ.  9/11 ದಾಳಿಯಲ್ಲಿ ಯಾವುದೇ ಪಾಕಿಸ್ತಾನಿಯೂ ಇಲ್ಲದೇ ಇದ್ದರೂ ಸಹ ಅಮೆರಿಕ ಭಯೋತ್ಪಾದನೆ ವಿರುದ್ಧ ನಡೆಸಿದ್ದ ಹೋರಾಟದಲ್ಲಿ ಪಾಕ್ ಸಹ ಕೈ ಜೋಡಿಸಲು ನಿರ್ಧರಿಸಿತ್ತು. ಈ ಹಂತದಲ್ಲಿ ಪಾಕಿಸ್ತಾನ ಸಹ 75,000 ಸಾವು-ನೋವುಗಳನ್ನು ಕಂಡಿದ್ದು, 123 ಬಿಲಿಯನ್ ಡಾಲರ್ ನಷ್ಟು ಹಣವನ್ನೂ ಕಳೆದುಕೊಂಡಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. 

Imran Khan✔@ImranKhanPTI

Record needs to be put straight on Mr Trump's tirade against Pakistan: 1. No Pakistani was involved in 9/11 but Pak decided to participate in US War on Terror. 2. Pakistan suffered 75,000 casualties in this war & over $123 bn was lost to economy. US "aid" was a miniscule $20 bn.

48.9K

17:07 - 19 Nov 2018

Twitter Ads information and privacy

22.6K people are talking about this

ಅಮೆರಿಕಾ ಉಗ್ರ ವಿರೋಧಿ ಯುದ್ಧದಿಂದಾಗಿ ಪಾಕಿಸ್ತಾನಕ್ಕೆ ಆರ್ಥಿಕವಾಗಿ ನಷ್ಟವಾಗುವುದಷ್ಟೇ ಅಲ್ಲದೇ ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಿಗೂ ಹಾನಿಯುಂಟಾಗಿದೆ. ಇದರಿಂದಾಗಿ ಸಾಮಾನ್ಯ ಪಾಕಿಸ್ತಾನಿಯರ ಜೀವನಕ್ಕೂ ಸಾಕಷ್ಟು ಹಾನಿಯಾಗಿದೆ ಎಂದು ಇಮ್ರಾನ್ ಖಾನ್ ಅಮೆರಿಕ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿದ್ದು, ಇಷ್ಟೆಲ್ಲಾ ತ್ಯಾಗ ಮಾಡಿರುವ ಮತ್ತೊಂದು ಮಿತ್ರ ರಾಷ್ಟ್ರದ ಹೆಸರನ್ನು ಉಲ್ಲೇಖಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸಾಧ್ಯವೇ ಎಂದು ಇಮ್ರಾನ್ ಖಾನ್ ಪ್ರಶ್ನಿಸಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا