Urdu   /   English   /   Nawayathi

ಉಗ್ರರಿಂದ ಪೌರರ ಹತ್ಯೆಯ ವಿಡಿಯೋ ಬಗ್ಗೆ ತನಿಖೆ: ಕಾಶ್ಮೀರ ಐಜಿಪಿ ಪಾಣಿ

share with us

ಶ್ರೀನಗರ: 19 ನವೆಂಬರ್ (ಫಿಕ್ರೋಖಬರ್ ಸುದ್ದಿ) ಉಗ್ರರು ತಾವು ಅಪಹರಿಸಿದ ಪೌರರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿ ಗುಂಡಿಕ್ಕಿ ಸಾಯಿಸುವ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಕಂಡು ಬಂದಿದ್ದು ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಾಶ್ಮೀರ  ಐಜಿಪಿ ಎಸ್‌ ಪಿ ಪಾಣಿ ಇಂದು ಸೋಮವಾರ ಹೇಳಿದ್ದಾರೆ. ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆ ಈಚೆಗೆ ತಾನು ಅಪಹರಿಸಿ ಒಯ್ದಿದ್ದ ಇಬ್ಬರು ಪೌರರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿ ಗುಂಡಿಕ್ಕಿ ಸಾಯಿಸುವ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. 

ಉಗ್ರರ ಈ ರೀತಿಯ ಕ್ಯಾಮೆರಾ ಮುಂದಿನ ಹತ್ಯೆ ಮತ್ತು ಅದರ ವಿಡಿಯೋ ಬಿಡುಗಡೆ ಕೃತ್ಯವು ಅತ್ಯಂತ ಪೈಶಾಚಿಕ ಕೃತ್ಯವಾಗಿದೆಯಲ್ಲದೆ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ ಲೋಡ್‌ ಮಾಡಿರುವುದು ಇನ್ನೂ ದೊಡ್ಡ ಅಪರಾಧವಾಗಿದೆ. ಈ ಬಗ್ಗೆ ನಾವು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪಾಣಿ ಹೇಳಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا