Urdu   /   English   /   Nawayathi

ತಾಜ್‌ನಲ್ಲಿ ಬಜರಂಗದಳ ಪೂಜೆ

share with us

ಲಖನೌ: 18 ನವೆಂಬರ್ (ಫಿಕ್ರೋಖಬರ್ ಸುದ್ದಿ) ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮತ್ತು ಪ್ರೇಮದ ಸಂಕೇತವಾದ ತಾಜ್‌ ಮಹಲ್‌ನಲ್ಲಿ ಶನಿವಾರ ಬಜರಂಗದಳ ಮಹಿಳಾ ಘಟಕದ ಕಾರ್ಯಕರ್ತರು ಆರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ. ತಾಜ್‌ ಆವರಣದೊಳಗೆ ನುಗ್ಗಿದ ಬಜರಂಗದಳದ ಮಹಿಳಾ ಕಾರ್ಯಕರ್ತರು ತಮ್ಮೊಂದಿಗೆ ಬಾಟಲಿಗಳಲ್ಲಿ ತಂದಿದ್ದ ಗಂಗಾಜಲವನ್ನು ಸಿಂಪಡಿಸಿ ಆವರಣವನ್ನು ಶುದ್ಧಗೊಳಿಸಿದರು. ನಂತರ ಆರತಿ ಬೆಳಗಿ ಪೂಜೆ ನೆರವೇರಿಸಿದರು.

ಭಾರತೀಯ ಪುರಾತತ್ವ ಇಲಾಖೆ ಆಕ್ಷೇಪದ ಹೊರತಾಗಿಯೂ ತಾಜ್‌ ಮಹಲ್‌ ಆವರಣದಲ್ಲಿ ಇತ್ತೀಚೆಗೆ ನಮಾಜ್ ಸಲ್ಲಿಸಲಾಗಿತ್ತು. ಶುಕ್ರವಾರ ಹೊರತಾಗಿ ಬೇರೆ ದಿನಗಳಲ್ಲಿ ತಾಜ್‌ ಆವರಣದಲ್ಲಿರುವ ಮಸೀದಿಯಲ್ಲಿ ನಮಾಜ್‌ ಸಲ್ಲಿಸಲು ಅವಕಾಶ ಇಲ್ಲ.

ನಮಾಜ್‌ನಿಂದಾಗಿ ತಾಜ್‌ ಮಹಲ್‌ ಆವರಣ ಅಪವಿತ್ರವಾಗಿದೆ ಎಂದು ಆರೋಪಿಸಿ ಬಜರಂಗದಳ ಮಹಿಳಾ ಕಾರ್ಯಕರ್ತರು ಗಂಗಾಜಲ ಸಿಂಪಡಿಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا