Urdu   /   English   /   Nawayathi

ಹೆಸರು ಬದಲಿಸುವುದರಿಂದ ದೇಶ ಶ್ರೀಮಂತವಾಗುತ್ತದೆ ಎಂದಾದರೇ, ಎಲ್ಲರಿಗೂ 'ರಾಮ'ನ ಹೆಸರಿಡಿ: ಹಾರ್ದಿಕ್ ಪಟೇಲ್

share with us

ಗುಜರಾತ್: 15 ನವೆಂಬರ್ (ಫಿಕ್ರೋಖಬರ್ ಸುದ್ದಿ) ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಶ್ರೀಮಂತ ದೇಶ ಆಗುತ್ತದೆ ಎಂದರೇ ದೇಶದ ಎಲ್ಲ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳ್ಳೆಯದು ಎಂದು ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ (ಪಾಸ್‌) ನಾಯಕ ಹಾರ್ದಿಕ್‌ ಪಟೇಲ್‌ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೈಜಾಬಾದನ್ನು ಅಯೋಧ್ಯೆ ಎಂದೂ, ಅಲಹಾಬಾದ್‌ ಅನ್ನು ಪ್ರಯಾಗ್‌ರಾಜ್‌ ಎಂದೂ ಪುನರ್‌ ನಾಮಕರಣ ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರವನ್ನು ಲೇವಡಿ ಮಾಡಿದರು.

ನಗರಗಳ ಹೆಸರನ್ನು ಬದಲಾಯಿಸುವ ಮೂಲಕ ದೇಶವನ್ನು ಚಿನ್ನದ ಹಕ್ಕಿಯನ್ನಾಗಿ ಮಾಡಬಹುದು ಎಂದು ನೀವು ಭಾವಿಸುವುದಾದರೆ ದೇಶದ ಎಲ್ಲ 125 ಕೋಟಿ ಜನರ ಹೆಸರನ್ನು ರಾಮನೆಂದು ಬದಲಾಯಿಸಿ' ಎಂದು ಹೇಳಿದರು. 

ಯೋಗಿ ಆದಿತ್ಯನಾಥ್‌ ಅವರು ನಗರ ಪುನರ್‌ ನಾಮಕರಣಕ್ಕೆ ಕೈ ಹಚ್ಚಿದ ಬಳಿಕ ದೇಶದ ಇತರ ಭಾಗದಲ್ಲಿನ ನಗರಗಳು ಮತ್ತು ಸ್ಥಳಗಳ ಹೆಸರನ್ನು ಬದಲಾಯಿಸಬೇಕೆಂಬ ಕೂಗು ಈಗ ವ್ಯಾಪಕವಾಗಿ ಕೇಳಿಬರುತ್ತಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا