Urdu   /   English   /   Nawayathi

ತಮಿಳುನಾಡಿಗೆ 'ಗಜ' ಭೀತಿ: ಹಲವರ ಸ್ಥಳಾಂತರ, ರಕ್ಷಣೆಗಾಗಿ 30 ಸಾವಿರ ಸಿಬ್ಬಂದಿ ಸನ್ನದ್ಧ

share with us

ಚೆನ್ನೈ: 15 ನವೆಂಬರ್ (ಫಿಕ್ರೋಖಬರ್ ಸುದ್ದಿ) ಗಜ ಚಂಡಮಾರುತ ಗುರುವಾರ ಮಧ್ಯಾಹ್ನ ಹೊತ್ತಿಗೆ ತಮಿಳುನಾಡಿನ ಆರು ಜಿಲ್ಲೆಗಳ ಕಡಲ ಕಿನಾರೆಗೆ ಬಂದಪ್ಪಳಿಸುವ ಸಾಧ್ಯತೆ ತೀವ್ರವಾಗಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಆರು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಇನ್ನು ಹಲವರು ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಪರಿಸ್ಥಿತಿ ನಿರ್ವಹಣೆಗಾಗಿ ಸುಮಾರು 30 ಸಾವಿರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

Harish Murali@harismurali

A calm port on Thursday morning . Not a single boat ventured into the sea due to . The port authorities hoisted the third warning flag. ⁦⁦@NewIndianXpress⁩.

25

8:39 AM - Nov 15, 2018

See Harish Murali's other Tweets

ಚಂಡಮಾರುತದಿಂದ ಉಂಟಾಗಬಹುದಾದ ಹಾನಿಯಿಂದ ತಪ್ಪಿಸಿಕೊಳ್ಳಲು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದ ರಾಜ್ಯ ಕಂದಾಯ ಸಚಿವ ಗಜ ಚಂಡಮಾರುತ ಪಶ್ಚಿಮ ಮತ್ತು ನೈರುತ್ಯ ದಿಕ್ಕಿನತ್ತ ಪ್ರತಿ ಗಂಟೆಗೆ 10 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದು ಚೆನ್ನೈಯಿಂದ 490 ಕಿಲೋ ಮೀಟರ್ ಮತ್ತು ನಾಗಪಟ್ಟಿಂನಿಂದ ಪೂರ್ವ ಮತ್ತು ಈಶಾನ್ಯ ದಿಕ್ಕಿಗೆ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ಎಂದರು. ಚಂಡಮಾರುತ ಪಶ್ಚಿಮ ಮತ್ತು ನೈರುತ್ಯ ದಿಕ್ಕಿಗೆ ಚಲಿಸಿದ ನಂತರ ಮುಂದಿನ 12 ಗಂಟೆಗಳಲ್ಲಿ ಅದರ ಪರಿಣಾಮ ತೀವ್ರವಾಗಿರುತ್ತದೆ. ನಂಚರ ಅದು ಪಂಬನ್ ಮತ್ತು ಕದ್ದಲೂರುಗಳಲ್ಲಿ ನೆಲೆಯಾಗಲಿದೆ. ಚಂಡಮಾರುತದಿಂದಾಗಿ ಕದ್ದಲೂರು, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಇಂದು ತೀವ್ರ ಮಳೆಯಾಗಲಿದೆ.

ಹೀಗಾಗಿ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಇದೇ ವೇಳೆ ಗಲೆ ಚಂಡಮಾರುತ ಪ್ರತಿ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ತಮಿಳುನಾಡಿನ ಉತ್ತರ ಕರಾವಳಿ ಭಾಗದಲ್ಲಿ ಅಪ್ಪಳಿಸಲಿದೆ. ಹೀಗಾಗಿ ಮೀನುಗಾರರಿಗೆ ಸಮುದ್ರ ತೀರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಚಂಡಮಾರುತದಿಂದಾಗಿ ನಾಗಪಟ್ಟಿಂ, ತಂಜಾವೂರು, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಸಮುದ್ರ ನೀರಿನ ಒಳಹರಿವು ಹೆಚ್ಚಾಗಲಿದೆ. ಇದರಿಂದ ಗುಡಿಸಲುಗಳು, ವಿದ್ಯುತ್ ಮತ್ತು ಟೆಲಿಕಾಂ ಕೇಬಲ್ ಸೇವೆಗಳಿಗೆ ಹಾನಿಗೀಡಾಗಬಹುದು. ಗಿಡ-ಮರಗಳು ನೆಲಕ್ಕುರುಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ. ಯಾವುದೇ ಕ್ಷಣದಲ್ಲಿ ಉಂಟಾಗಬಹುದಾದ ಪ್ರಾಕೃತಿಕ ವಿಕೋಪಗಳನ್ನು ತಪ್ಪಿಸಲು ರಣವೀರ್ ಮತ್ತು ಖಂಜಾರ್ ಎಂಬ ಎರಡು ಭಾರತೀಯ ನೌಕಾ ಹಡಗುಗಳನ್ನು ನಿಯೋಜಿಸಲಾಗಿದೆ.

ಚಂಡಮಾರುತದಿಂದ ತಮಿಳುನಾಡಿನಾದ್ಯಂತ ಇನ್ನು ಎರಡು ಮೂರು ದಿನಗಳವರೆಗೆ ವ್ಯಾಪಕ ಮಳೆಯಾಗುವ ಸೂಚನೆಯಿರುವುದರಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೆಟ್ರೋಲಿಯಂ ಬಂಕ್ ಗಳಲ್ಲಿ ಸಾಕಷ್ಟು ಪೆಟ್ರೋಲ್ ಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಲಾಗಿದೆ. ಅನಿಯಮಿತಿ ಟೆಲಿಕಾಂ ಸೇವೆ ನೀಡಲು 15 ದಿನಗಳವರೆಗೆ ಸಾಕಷ್ಟು ಇಂಧನವನ್ನು ಉತ್ಪತ್ತಿ ಮಾಡಿ ಸಂಗ್ರಹಿಸಲು ಸೂಚಿಸಲಾಗಿದೆ. ನಾಗಪಟ್ಟಿಂ ಮತ್ತು ಕದ್ದಲೂರು ಜಿಲ್ಲೆಗಳಲ್ಲಿ ಅನಿಯಮಿತ ಸೇವೆ ನೀಡಲು ಸೆಲ್ ಆನ್ ವೀಲ್ಸ್ ನೀಡಲಾಗಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا