Urdu   /   English   /   Nawayathi

ರಾಜಸ್ಥಾನದಲ್ಲಿ ಕಮಲ ಪಾಳಯಕ್ಕೆ ಆಘಾತ: ಕೇಸರಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಹರೀಶ್ ಮೀನಾ

share with us

ನವದೆಹಲಿ: 14 ನವೆಂಬರ್ (ಫಿಕ್ರೋಖಬರ್ ಸುದ್ದಿ) ರಾಜಾಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನವೇ ಬಿಜೆಪಿಗೆ ಆಘಾತವಾಗಿದೆ. ರಾಜ್ಯ ಬಿಜೆಪಿ ನೇತಾರ, ಸಂಸದ ಹರೀಶ್ ಮೀನಾ ಕೇಸರಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ರಾಜಸ್ಥಾನದ ಮಾಜಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಮೀನಾ ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸಚಿನ್ ಪೈಲಟ್ ಹಗೂ  ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ಕೈ ಪಾಳಯಕ್ಕೆ ಔಪಚಾರಿಕವಾಗಿ ಸೇರ್ಪಡೆಯಾಗಿದ್ದಾರೆ. ದೌಸಾ ಕ್ಷೇತ್ರದ ಸಂಸದರಾಗಿದ್ದ ಮೀನಾ 2014ರ ಮಹಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದು ಅವರ ಸೋದರ್ರಾದ ಕಾಂಗ್ರೆಸ್ ಪಕ್ಷದ ಎದುರಾಳಿ ನಮೋ ನರಾಯಣ್ ಮೀನಾ ಅವರನ್ನು ಮಣಿಸಿದ್ದರು.

ನರೇಂದ್ರ ಮೋದಿ ಸರ್ಕಾರ ತನ್ನ ಭರವಸೆಯನ್ನು ಪೂರೈಸಲು ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮೀನಾ ತಾನು ಕಾಂಗ್ರೆಸ್ ಸೇರುವುಉದನ್ನು "ಮರಳಿ ಮನೆಗೆ ಹಿಂದಿರುಗುವಿಕೆ" ಎಂದು ಬಣ್ಣಿಸಿಕೊಂಡಿದ್ದಾರೆ.

ಇದಕ್ಕೆ ಮುನ್ನ ಬಿಜೆಪಿ ಹಿರಿಯ ನಾಯಕ ಹಾಗೂ  ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಪುತ್ರ ರಾಜಸ್ಥಾನದ  ಬಿಜೆಪಿ ಶಾಸಕ ಮನ್ವೇಂದ್ರ ಸಿಂಗ್ ಸಹ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.

ಬರುವ ಡಿಸೆಂಬರ್ ಏಳರಂದ್ಯು ರಾಜಸ್ಥಾನ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا