Urdu   /   English   /   Nawayathi

ಶ್ವಾನಗಳ ಮಾನವ ಪ್ರೀತಿ: ಕರಡಿ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಸಾಕುನಾಯಿಗಳು!

share with us

ಬೆಳಗಾವಿ: 13 ನವೆಂಬರ್ (ಫಿಕ್ರೋಖಬರ್ ಸುದ್ದಿ) ನಾಯಿಗಳು ಮಾನವನ ಅತ್ಯುತ್ತಮ ಮಿತ್ರ ಎನ್ನುವುದು ಈ ಘಟನೆಯಿಂದ ಇನ್ನೊಮ್ಮೆ ಸಾಬೀತಾಗಿದೆ. ಎರಡು ನಾಯಿಗಳು ಕರಡಿ ದಾಳಿಯಿಂದ ತಮ್ಮ ಮಾಲೀಕನನ್ನು ಕಾಪಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಖಾನಾಪುರದ ಲೋಂಡಾ ಸಮೀಪ ನಡೆದಿದೆ. ಲೋಂಡಾದ ಮೊಹಿಶೇತ್ ಗ್ರಾಮದಲ್ಲಿ ಸಂಭವಿಸಿದ ಪ್ರಕರಣದಲ್ಲಿ ಎರಡು ನಾಯಿಗಳು ತಮ್ಮ 51 ವರ್ಷದ ಮಾಲೀಕನ ಜೀವವನ್ನು ರಕ್ಷಿಸಿದೆ. ಮೊಹಿಶೇತ್ ಗ್ರಾಮದ ನಿವಾಸಿಯಾದ ಪರಶುರಾಮ ಕೀರಪ್ಪ ಮಿರಾಶಿ ಎನ್ನುವವರು ಭಾನುವಾರ ಸಂಜೆ 7.15ರ ಸುಮಾರು ತಮ್ಮ ಜಮೀನಿನಿಂದ ಮನೆಗೆ ಹಿಂತಿರುಗುತ್ತಿದ್ದರು. ಖಾನಾಪುರ ಅರಣ್ಯ ಮಾರ್ಗದ ನಡುವೆ ಸಾಗುವಾಗ ಅವರ ಮೇಲೆ ಕರಡಿಗಳು ದಾಳಿ ಮಾಡಿದೆ. ಆದರೆ ಮಿರಾಶಿ ಬಳಿಯಿದ್ದ ಎರಡು ನಾಯಿಗಳು ಕರಡಿಗಳನ್ನು ಹಿಮ್ಮೆಟ್ಟಿಸಿ ಮಾಲೀಕನನ್ನು ಸುರಕ್ಷಿತವಾಗಿ ಮನೆಗೆ ತಲುಪಲು ಸಹಾಯ ಮಾಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಮಿರಾಶಿ ಹತ್ತಿರದ ಮರವನ್ನೇರಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಕರಡಿಯೊಂದು ಅವರ ಕಾಲನ್ನು ಕಚ್ಚಿ ಹಿಡಿದಿತ್ತು. ಆದರೆ ಅವರ ನಾಯಿಗಳು ಕರಡಿ ಮೇಲೆ ಆಕ್ರಮಣ ನಡೆಸಿದ್ದ ಕಾರಣ ಅವರು ದಾಳಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಿದೆ.

ನಾಯಿಗಳ ನಿರಂತರ ದಾಳಿಯು ಪ್ರಾರಂಭವಾಗಲು ಕರಡಿಗಳು ನಾಯಿಗಳನ್ನು ಅಟ್ಟಾಡಿಸಿಕೊಂಡು ಹೋದವು. ಇತ್ತ ಮರವೇರಿದ್ದ ಮಿರಾಶಿ ಹತ್ತಿರದಲ್ಲಿ ಎಲ್ಲಿಯೂ ಕರಡಿಗಳಿಲ್ಲ ಎಂದು ಅರಿವಾದಾಗ ಮರದಿಂದಿದ್ಳಿದು ಹತ್ತಿರದ ಮೈದಾನವೊಂದಕ್ಕೆ ಆಗಮಿಸಿ ಅಲ್ಲಿನ ಶೆಡ್ ಒಂದರಲ್ಲಿ ತಂಗಿದರು. ಸುಮಾರು ಅರ್ಧ ಗಂಟೆಗಳ ಬಳಿಕ ಅವರು ಶೆಡ್ ನಿಂದ ಹೊರಬಂದು ಒಂದು ದೊಡ್ಡ ಕಟ್ಟಿಗೆ ತುಂಡನ್ನು ರಕ್ಷಣೆಗಾಗಿ ಹಿಡಿದು ಸುರಕ್ಷಿತವಾಗಿ ಮನೆ ಸೇರಿದ್ದಾರೆ.

ಮಿರಾಶಿ ಮನೆ ತಲುಪಿದ ತಕ್ಷಣವೇ ಕುಟುಂಬಸ್ಥರು ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ತ್ಕಃಸ್ಣ ಮಿರಾಶಿ ಮನೆಗೆ ಆಗಮಿಸಿದ ಅರಣ್ಯ ಅಧಿಕಾರಿಗಳ ತಂಡ ಅವರನ್ನು ಲೋಂಡಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದೆ. ಮಿರಾಶಿ ಪರೀಕ್ಷೆ ನಡೆಸಿದ ವೈದ್ಯರು ಅವರು ಆರೋಗ್ಯದಿಂದಿದ್ದಾರೆ ಎಂದು ತಿಳಿಸಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا