Urdu   /   English   /   Nawayathi

SHOCKING : ದೆಹಲಿಯಲ್ಲಿ ಉಸಿರಾಡುವುದು ದಿನಕ್ಕೆ 14 ಸಿಗರೇಟ್ ಸೇದುವುದಕ್ಕೆ ಸಮ…!

share with us

ನವದೆಹಲಿ: 13 ನವೆಂಬರ್ (ಫಿಕ್ರೋಖಬರ್ ಸುದ್ದಿ) ದಿನೇ ದಿನೇ ವಿಷಮಯವಾಗುತ್ತಿರುವ ದೆಹಲಿಯ ವಾತಾವರಣ ಜನರನ್ನು ಹಲವು ಸಂಕಷ್ಟಗಳಿಗೆ ಸಿಲುಕಿಸುತ್ತಿದೆ. ಇದೇ ಕಾರಣಕ್ಕೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ 200 ಖಾಸಗಿ ಶಾಲೆಗಳನ್ನು ಬಂದ್ ಮಾಡಲಾಗಿದೆ.  ದೆಹಲಿಯ ಹಲವೆಡೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದ್ದು, ಇಲ್ಲಿ ಉಸಿರಾಡುವುದು ದಿನವೊಂದಕ್ಕೆ 14 ಸಿಗರೇಟ್‍ಗಳನ್ನು ಸೇದುವುದಕ್ಕೆ ಸಮ ಎಂದೇ ಹೇಳಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ 200ಕ್ಕೂ ಹೆಚ್ಚು ಖಾಸಗಿ ಶಾಲೆಗಳು ತಾತ್ಕಾಲಿಕವಾಗಿ ಬಂದ್ ಮಾಡಿವೆ. ಇನ್ನು ಜನರ ಪಾಡು ಹೇಳತೀರದಾಗಿದೆ.

ವಿಷಯುಕ್ತ ವಾತಾವರಣದಿಂದ ರಾಷ್ಟ್ರ ರಾಜಧಾನಿ ತತ್ತರಿಸುತ್ತಿದೆ. ದೀಪಾವಳಿಯ ನಂತರವಂತೂ ವಾಯುಗುಣ ಮತ್ತಷ್ಟು ಹದಗೆಟ್ಟಿದೆ. ಸದ್ಯದ ಮಾಹಿತಿಯಂತೆ ಲೋಧಿ ರಸ್ತೆಯಲ್ಲಿ ಮಾಲಿನ್ಯದ ಮಟ್ಟ ಮಧ್ಯಾಹ್ನ 2.5ಕ್ಕೆ 373 ಹಾಗೂ ರಾತ್ರಿ 10 ಗಂಟೆಗೆ 286ರಷ್ಟಾಗಿತ್ತು. ಈ ಅಂಕಗಳು ಅತ್ಯಂತ ಕೆಟ್ಟ ವಾತಾವರಣ ಎಂದು ವಾಯು ಗುಣಮಟ್ಟ ಸೂಚ್ಯಂಕದಿಂದ ತಿಳಿಯುತ್ತಿದೆ.

ರಾಷ್ಟ್ರೀಯ ಹಸಿರು ಪೀಠವು ಉತ್ತರಪ್ರದೇಶ, ಪಂಜಾಬ್, ಹರ್ಯಾಣ, ರಾಜಸ್ಥಾನ ಹಾಗೂ ದೆಹಲಿಯ ಕೃಷಿ ಪ್ರಧಾನ ಕಾರ್ಯದರ್ಶಿಗಳಿಗೆ ಸಮನ್ಸ್ ಜÁರಿ ಮಾಡಿ ದೆಹಲಿಯಲ್ಲಿ ಉಂಟಾಗಿರುವ ಕೆಟ್ಟ ವಾತಾವರಣದ ಬಗ್ಗೆ ನಿಗಾ ಇರಿಸುವಂತೆ ಹೇಳಿದೆ.  ಅಲ್ಲದೆ, ಐದೂ ರಾಜ್ಯಗಳ ಕೃಷಿ ಪ್ರಧಾನ ಕಾರ್ಯದರ್ಶಿಗಳು ನಾಳೆ ಪೀಠದ ಮುಂದೆ ಹಾಜರಾಗುವಂತೆ ಸೂಚನೆ ನೀಡಿದೆ. ತುರ್ತು ಸಂದರ್ಭ ನಿರ್ಮಾಣವಾಗಿರುವುದರಿಂದ ಇನ್ನೆರಡು ದಿನಗಳಲ್ಲೇ  ಈ ಬಗ್ಗೆ ವಿಚಾರಣೆ ನಡೆಸುವುದಾಗಿಯೂ ಹೇಳಿದೆ.

Delhi--013

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا