Urdu   /   English   /   Nawayathi

ಭಟ್ಕಳದ ಮೀನು ಮಾರುಕಟ್ಟೆಯ ಕಟ್ಟಡ ಇದೀಗ ಕುಡುಕರ ತಾಣವಾಗಿ ಬದಲಾಗಿದೆ

share with us

ಭಟ್ಕಳ: 12 ನವೆಂಬರ್ (ಫಿಕ್ರೋಖಬರ್ ಸುದ್ದಿ) ಭಟ್ಕಳದ ಪುರಸಭೆ ವ್ಯಾಪ್ತಿಯಲ್ಲಿರುವ ಸಂತೆ ಮಾರುಕಟ್ಟೆ ಇದೀಗ ಕುಡುಕರ ತಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಲೈ 2016 ರಂದು ಸುಮಾರು 1.30 ಕೋಟಿ ವೆಚ್ಚದಲ್ಲಿ ಕರಾವಳಿ ಪ್ರಾಧಿಕಾರದ ಅನುದಾನ ಅಡಿಯಲ್ಲಿ ನಿರ್ಮಾಣಗೊಂಡ ಸಂತೆ ಮಾರುಕಟ್ಟೆ ಇದುವರೆಗೂ ವ್ಯಾಪಾರಸ್ಥರಿಗೆ ಹಸ್ತಾಂತರಗೊಳ್ಳದೇ ಇತ್ತೀಚಿಗೆ ಇದು ಕುಡುಕರ ತಾಣವಾಗಿದೆ. ಕೇವಲ ಭಾನುವಾರದಂದು ತರಕಾರಿ ಸಂತೆ ನಡೆಯುವ ಕಾರಣ ಜನ ಸಂಚಾರವಿರುತ್ತದೆ ಉಳಿದ ದಿನಗಳಲ್ಲಿ ಮಾರುಕಟ್ಟೆ ಭಿಕ್ಷೆ ಬೇಡುವವರಿಗೆ ವಿಶ್ರಾಂತಿಯ ತಾಣ ಹಾಗೂ ರಾತ್ರಿಯ ವೇಳೆ ಕುಡುಕರ ಅಡ್ಡವಾಗಿದೆ. ಜಾಗದ ಅಕ್ಕಪಕ್ಕದಲ್ಲಿ ಮದ್ಯದ ಹಲವಾರು ಬಾಟಲಿ ಹಾಗೂ ಕೆಲವು ತ್ಯಾಜ್ಯ ವಸ್ತುಗಳು ಕಂಡು ಬರುತ್ತಿದೆ. ಇದನ್ನು ಗಮನದಲ್ಲಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಕಾಳಜಿವಹಿಸಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ. 
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا