Urdu   /   English   /   Nawayathi

ಪ್ರಧಾನಿ ಮೋದಿ ಬೆಂಬಲಿಸಿ ಎಎಪಿ ಮಾಜಿ ಸಚಿವ ಕಪಿಲ್ ಮಿಶ್ರಾರಿಂದ ಹೊಸ ಅಭಿಯಾನ!

share with us

 

ನವದೆಹಲಿ: 11 ನವೆಂಬರ್ (ಫಿಕ್ರೋಖಬರ್ ಸುದ್ದಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸದಾ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುತ್ತಿದ್ದರೆ ಇತ್ತ ಆಮ್ ಆದ್ಮಿ ಪಾರ್ಟಿ(ಎಎಪಿ) ಶಾಸಕ ಹಾಗೂ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಹೊಸ ಅಭಿಯಾನವನ್ನು ಶುರು ಮಾಡುತ್ತಿರುವುದು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಪಿಲ್ ಮಿಶ್ರಾ ಅವರು ನನ್ನ ಪ್ರಧಾನಿ ನನ್ನ ಹೆಮ್ಮೆ ಎಂಬ ಅಭಿಯಾನವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಾರಂಭಿಸುವುದಾಗಿ ವಿಡಿಯೋ ಮೂಲಕ ತಿಳಿಸಿರುವ ಕಪಿಲ್ ಮಿಶ್ರಾ ತಮ್ಮ ಅಭಿಯಾನಕ್ಕೆ ದೇಶದ ಜನತೆ ಸಹಕಾರ ನೀಡಬೇಕೆಂದು ಕೋರಿದ್ದಾರೆ. 

ನವದೆಹಲಿಯ ಇಂಡಿಯಾ ಗೇಟ್ ಬಳಿ ಅಭಿಯಾನ ಪ್ರಾರಂಭಿಸುವುದಾಗಿ ತಿಳಿಸಿದ ಶಾಸಕ ಕಪಿಲ್ ಮಿಶ್ರಾ, ಇದರಲ್ಲಿ ಜನತೆ ಭಾಗಿಯಾಗಬೇಕೆಂದು ಕೇಳಿಕೊಂಡಿದ್ದಾರೆ. ತಮ್ಮ ಟ್ವೀಟರ್ ನಲ್ಲಿ ವಿಡಿಯೋ ಮೂಲಕ ಕಪಿಲ್ ಮಿಶ್ರಾ ಹಾಕಿಕೊಂಡಿದ್ದಾರೆ. ಈ ಟ್ವೀಟ್ ಅನ್ನು ಸಾವಿರಾರು ಮಂದಿ ಲೈಕ್ ಹಾಗೂ ರೀಟ್ವೀಟ್ ಮಾಡಿದ್ದಾರೆ. ಈ ಅಭಿಯಾನವನ್ನು ಬೆಂಬಲಿಸುವುದಾಗಿ ಹಲವು ಟ್ವೀಟ್ ಮಾಡಿದ್ದಾರೆ.

ಕ, ಪ್ರ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا