Urdu   /   English   /   Nawayathi

ಕ್ಯಾಲಿಫೋರ್ನಿಯಾ ಇತಿಹಾಸದಲ್ಲೇ ಭೀಕರ ದುರಂತ: ಕಾಳ್ಗಿಚ್ಚಿಗೆ 23 ಮಂದಿ ದಹನ

share with us

ಕ್ಯಾಲಿಫೋರ್ನಿಯಾ: 11 ನವೆಂಬರ್ (ಫಿಕ್ರೋಖಬರ್ ಸುದ್ದಿ) ಅಮೆರಿಕಾ ಕ್ಯಾಲಿಫೋರ್ನಿಯಾದ ಇತಿಹಾಸದಲ್ಲಿ ಕಂಡು ಕೇಳರಿಯದ ಕಾಳ್ಗಿಚ್ಚಿಗೆ ಇದುವರೆಗೆ 23 ಮಂದಿ ಬಲಿಯಾಗಿದ್ದಾರೆ. ಶನಿವಾರದವರೆಗೆ ವಿನಾಶಕಾರಿ ಕಾಳ್ಗಿಚ್ಚಿಗೆ ಸಿಕ್ಕಿದ 14 ಜನರ ದೇಹಗಳನ್ನು ಪತ್ತೆಹಚ್ಚಲಾಗಿದೆ. ಇಂದು (ಭಾನುವಾರ) ಮತ್ತೆ ಒಂಬತ್ತು ದೇಹಗಳು ಸಿಕ್ಕಿದ್ದು ಒಟ್ಟಾರೆ ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾದ್ಯಮಗಳಿಗೆ ತಿಳಿಸಿದ್ದಾರೆ.

ಉತ್ತರ ಕ್ಯಾಲಿಫೋರ್ನಿಯಾದ ಪರ್ವತ ನಗರಿ ಪ್ಯಾರಡೈಸ್ನಲ್ಲಿ ಕಳೆದೆರಡು ದಿನಗಳಿಂದ ಭೀಕರ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು ಬಲವಾಗಿ ಬೀಸುವ ಗಾಳಿಯ ಕಾರಣ ಬೆಂಕಿಯ ಕೆನ್ನಾಲಿಗೆಗಳು ಅತಿ ವೇಗವಾಗಿ ಪಸರಿಸಿದೆ. ಇದರಿಂದ ಅಪಾರ ಪ್ರಮಾಣದ ಕಾಡುಮೇಡು ಸೇರಿ ಜೀವಹಾನಿ ಸಂಭವಿಸಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا