Urdu   /   English   /   Nawayathi

ಹಲ್ಲೆ ಮಾಡಿದವರ ಆಲ್ಬಂ ಬಿಡುಗಡೆ

share with us

ತಿರುವನಂತಪುರ: 10 ನವೆಂಬರ್ (ಫಿಕ್ರೋಖಬರ್ ಸುದ್ದಿ) ಇತ್ತೀಚೆಗೆ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ್ದ 52 ವರ್ಷದ ಮಹಿಳೆಯ ಮೇಲೆ ಕೆಲವರು  ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 150 ಆರೋಪಿಗಳ ಫೋಟೋಗಳುಳ್ಳ ಆಲ್ಬಂ ಒಂದನ್ನು ಬಿಡುಗಡೆ ಮಾಡಿದ್ದಾರೆ.  

ಅದನ್ನು  ಕೇರಳದ ಎಲ್ಲಾ ಜಿಲ್ಲಾ ಎಸ್‌ಪಿಗಳಿಗೆ ರವಾನಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ. ನ. 5ರಂದು ಮಹಿಳೆಯು ಶಬರಿಮಲೆಗೆ ಆಗಮಿಸಿದ್ದ ಸುಮಾರು 200ಕ್ಕೂ ಹೆಚ್ಚು ಭಕ್ತರು ಆಕೆಗೆ ದರ್ಶನಕ್ಕೆ ಅವಕಾಶ ಕಲ್ಪಿಸದೆ ತಳ್ಳಾಟ ನಡೆಸಿದ್ದರು. ಆ 200 ಜನರ ಮೇಲೂ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا