Urdu   /   English   /   Nawayathi

ಪಾಕ್‌: ಬ್ಯಾಂಕ್‌ ಖಾತೆಗಳಿಗೆ ಕನ್ನ

share with us

ಇಸ್ಲಾಮಾಬಾದ್‌: 08 ನವೆಂಬರ್ (ಫಿಕ್ರೋಖಬರ್ ಸುದ್ದಿ) ಸಾವಿರಾರು ಮಂದಿಯ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಿ ಹಣ ಲೂಟಿ ಮಾಡಿರುವುದು ಪಾಕಿಸ್ತಾನದಲ್ಲಿ ಪತ್ತೆಯಾಗಿದೆ. ಸುಮಾರು 12 ಬ್ಯಾಂಕ್‌ಗಳಲ್ಲಿನ 8 ಸಾವಿರ ಗ್ರಾಹಕರ ಖಾತೆಗಳ ಮಾಹಿತಿ ಪಡೆದು ಅಕ್ಟೋಬರ್‌ 27 ಮತ್ತು 28ರಂದು ಕನ್ನ ಹಾಕಲಾಗಿದೆ. ಈ ಖಾತೆಗಳಿಂದ ಸುಮಾರು ₹26 ಲಕ್ಷ ಪಡೆದು ವಂಚಿಸಲಾಗಿದೆ. ಅಂತರರಾಷ್ಟ್ರೀಯ ಕಾರ್ಡ್‌ಗಳನ್ನು ಬಳಸಿ ಈ ಹಣ ಲೂಟಿ ಮಾಡಲಾಗಿದೆ.

ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಖಾನ್‌ ಸಂಶೋಧನಾ ಪ್ರಯೋಗಾಲಯದ ಮಾಜಿ ಮುಖ್ಯ ವಿಜ್ಞಾನಿ ಅವರು ತಮ್ಮ ಖಾತೆಯಿಂದ 30 ಲಕ್ಷ ಲೂಟಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ದೂರು ನೀಡಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا